ಸಿರಿಯನ್ ಪಡೆಗಳ ದಾಳಿಗೆ ಕಾಲ್ಕಿತ್ತ ಇಸಿಸ್ ಉಗ್ರರು, ಡಮಾಸ್ಕಸ್ ಸೇನಾ ಪಡೆಗಳ ವಶಕ್ಕೆ!

ಸಿರಿಯನ್ ಸೇನಾಪಡೆಗಳ ದಾಳಿಗೆ ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಸಿರಿಯಾ ಮತ್ತು ಇರಾಕ್ (ಇಸಿಸ್) ಬೆದರಿದ್ದು, ಸಿರಿಯಾ ರಾಜಧಾನಿ ಡಮಾಸ್ಕಸ್ ನಿಂದ ಕಾಲ್ಕಿತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಡಮಾಸ್ಕಸ್: ಸಿರಿಯನ್ ಸೇನಾಪಡೆಗಳ ದಾಳಿಗೆ ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಸಿರಿಯಾ ಮತ್ತು ಇರಾಕ್ (ಇಸಿಸ್) ಬೆದರಿದ್ದು, ಸಿರಿಯಾ ರಾಜಧಾನಿ ಡಮಾಸ್ಕಸ್ ನಿಂದ ಕಾಲ್ಕಿತ್ತಿವೆ.
ಇತ್ತೀಚೆಗಷ್ಟೇ ಇಸಿಸ್ ಉಗ್ರರ ಕಪಿ ಹಿಡಿತದಲ್ಲಿರುವ ಡಮಾಸ್ಕಸ್ ಗೆ ನುಗ್ಗಿದ್ದ ಸಿರಿಯನ್ ಪಡೆಗಳು ಡಮಾಸ್ಕಸ್ ನಲ್ಲಿ ಆಟಾಟೋಪ ಮೆರೆಯುತ್ತಿದ್ದ ಇಸಿಸ್ ಉಗ್ರರ ಹುಟ್ಟಡಗಿಸಿದ್ದು, ಉಗ್ರರು ನಗರದಿಂದ ಕಾಲ್ಕೀಳುವಂತೆ ಮಾಡಿದ್ದಾರೆ. ಕಳೆದ ವಾರ ನಿರ್ಣಾಯಕ ಹಂತ ತಲುಪಿದ್ದ ಇಸಿಸ್ ಉಗ್ರರ ವಿರುದ್ದದ ಕದನ ಇದೀಗ ಬಹುತೇಕ ಮುಕ್ತಾಯಗೊಂಡಿದ್ದು, ಡಮಾಸ್ಕಸ್ ನಲ್ಲಿ ಅಲ್ಪ ಸಂಖ್ಯೆಯಲ್ಲಿದ್ದ ಇಸಿಸ್ ಉಗ್ರರನ್ನು ಸೇನಾ ಪಡೆಗಳು ಹೊಡೆದೋಡಿಸಿವೆ.
2012ರಲ್ಲಿ ಡಮಾಸ್ಕಸ್ ಮೇಲೆ ದಾಳಿ ಮಾಡಿ ಇಡೀ ನಗರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಇಸಿಸ್ ಉಗ್ರರು ನಗರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರು. ಅಮೆರಿಕ ನೇತೃತ್ವದ ಮಿತ್ರ ಪಡೆಗಳೊಂದಿಗೆ ಸೇರಿ ಸಿರಿಯಾ ಪಡೆಗಳು ಇಸಿಸ್ ವಿರುದ್ಧ ಕದನ ಆರಂಭಿಸಿದ್ದವು. ಇದೀಗ ಇಸಿಸ್ ವಿರುದ್ಧ ವಿಜಯಪತಾಕೆ ಹಾರಿಸಿರುವ ಸಿರಿಯಾ ಪಡೆಗಳು ರಾಜಧಾನಿ ಡಮಾಸ್ಕಸ್ ಅನ್ನು ತಮ್ಮ ವಶಕ್ಕೆ ಪಡೆದಿವೆ.
ಡಮಾಸ್ಕಸ್ ನ ದಕ್ಷಿಣ ಪ್ರಾಂತ್ಯದಲ್ಲಿ ಅಡಗಿ ಕುಳಿತಿದ್ದ ನೂರಾರು ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುತಾಣಗಳ ಮೇಲೆ ನಿನ್ನೆ ಸಿರಿಯಾ ಪಡೆಗಳು ದಾಳಿ ಮಾಡಿದ್ದು, ಈ ವೇಳೆ ಹತ್ತಾರು ಉಗ್ರರು ಹತರಾಗಿದ್ದಾರೆ. ಅಲ್ಲದೆ ನೂರಾರು ಉಗ್ರರು ನಗರವನ್ನು ತೊರೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸಿರಿಯಾ ಸೇನೆ ಡಮಾಸ್ಕಸ್ ಮತ್ತು ಅದರ ಹೊರ ಆವರಣ ಸಂಪೂರ್ಣ ಸುರಕ್ಷಿತವಾಗಿದ್ದು, ಇಸಿಸ್ ಉಗ್ರರನ್ನು ಹೊಡೆದೋಡಿಸಲಾಗಿದೆ ಎಂದು ಹೇಳಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com