ಕರ್ನಾಟಕದಲ್ಲಿ ಸೋತಿದ್ದರೂ, ಬಿಜೆಪಿ ಜನರ ಸಹಾನುಭೂತಿ ಗಳಿಸಿದೆ: ರಾಜ್ಯಸಭಾ ಸಂಸದ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿ ವಿರುದ್ಧವಿರಲಿಲ್ಲ. ಸರ್ಕಾರ ರಚನೆಯಲ್ಲಿ ವಿಫಲವಾಗಿರಬಹುದು, ಆದರೆ, ಬಿಜೆಪಿ ಜನರ ಸಹಾನುಭೂತಿಯನ್ನು ಗಳಿಸಿದೆ ಎಂದು ಉತ್ತರಪ್ರದೇಶ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಹೇಳಿದ್ದಾರೆ...
ಉತ್ತರಪ್ರದೇಶ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್
ಉತ್ತರಪ್ರದೇಶ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್
ನ್ಯೂಯಾರ್ಕ್: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿ ವಿರುದ್ಧವಿರಲಿಲ್ಲ. ಸರ್ಕಾರ ರಚನೆಯಲ್ಲಿ ವಿಫಲವಾಗಿರಬಹುದು, ಆದರೆ, ಬಿಜೆಪಿ ಜನರ ಸಹಾನುಭೂತಿಯನ್ನು ಗಳಿಸಿದೆ ಎಂದು ಉತ್ತರಪ್ರದೇಶ ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್ ಅವರು ಹೇಳಿದ್ದಾರೆ.
ಅಮೆರಿಕಾಗೆ ಖಾಸಗಿ ಭೇಟಿ ನೀಡಿರುವ ಅವರು, ಇದೇ ವೇಳೆ ಯುಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 
ಕರ್ನಾಟಕದ ಜನಾದೇಶ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧವಿತ್ತು. ಬಿಜೆಪಿಗೆ ಜನರು ಬೆಂಬಲ ನೀಡಿದ್ದರು. ಆದರೆ, ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚನೆ ಮಾಡುತ್ತಿದೆ. ಸರ್ಕಾರ ರಚಿಸುವಲ್ಲಿ ಬಿಜೆಪಿ ವಿಫಲವಾಗಿರಬಹುದು. ಆದರೆ, ಜನರ ಸಹಾನುಭೂತಿ, ಮನಸ್ಸನ್ನು ಬಿಜೆಪಿ ಗೆದ್ದಿದೆ ಎಂದು ಹೇಳಿದ್ದಾರೆ. 
ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ಗಢದಲ್ಲಿ ಬಿಜೆಪಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಗೆಲವು ಸಾಧಿಸಲಿದ್ದು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com