ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿಂಧೂ ನೀರು ಹಂಚಿಕೆ ಪರಿಹಾರ ಸೂತ್ರ: ಪಾಕಿಸ್ತಾನದೊಡನೆ ಒಡಂಬಡಿಕೆ ಇಲ್ಲ ಎಂದ ವಿಶ್ವ ಬ್ಯಾಂಕ್

ಭಾರತ ಹಾಗೂ ಪಾಕಿಸ್ತಾನ ನಡುವೆ ವಿವಾದಕ್ಕೆ ಕಾರಣವಾದ ಸಿಂಧೂ ನದಿ ನೀರು ಹಂಚಿಕೆ ವಿವಾದದ ಕುರಿತಂತೆ ತಾನು ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದೆ.
ವಾಷಿಂಗ್ ಟನ್: ಭಾರತ ಹಾಗೂ ಪಾಕಿಸ್ತಾನ ನಡುವೆ ವಿವಾದಕ್ಕೆ ಕಾರಣವಾದ ಸಿಂಧೂ ನದಿ ನೀರು ಹಂಚಿಕೆ ವಿವಾದದ ಪರಿಹಾರ ಕುರಿತಂತೆ ಪಾಕ್ ನೊಡನೆ ಒಡಂಬಡಿಕೆ ಮಾಡಿಕೊಳ್ಳುವುದಿಲ್ಲ ಎಂದು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದೆ.
ಜಮ್ಮು ಕಾಶ್ಮೀರದ ಕಿಶನ್ ಗಂಗಾ ಯೋಜನೆ ಉದ್ಘಾಟನೆಗೊಂಡ ಎರಡು ದಿನಗಳ ಬಳಿಕ ವಾಷಿಂಗ್ ಟನ್ ನಲ್ಲಿ ನಡೆದ ಮಾತುಕತೆ ವೇಳೆ ವಿಶ್ವ ಬ್ಯಾಂಕ್ ಈ ಹೇಳಿಕೆ ನಿಡಿದೆ.
ಅಟಾರ್ನಿ ಜನರಲ್ ಅಷ್ತಾರ್ ಅಸಫ್ ಅಲಿ ನೇತೃತ್ವದ ಉನ್ನತ-ಪಾಕಿಸ್ತಾನಿ ನಿಯೋಗವು ವಿಶ್ವ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ಟಲಿನಾ ಜಾರ್ಜಿವಾ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಈ ಚರ್ಚೆಯ ವೇಳೆ ಪಾಕಿಸ್ತಾನ ಭಾರತದೊಡನೆ ಸಿಂಧೂ ನದಿ ನೀರು ಹಂಚಿಕೆ ವಿಚಾರ ಸಂಬಂಧ ಒಂದು ಸೌಹಾರ್ದವಾದ ತೀರ್ಮಾನ ಕೈಗೊಳ್ಳಲು, ಎರಡು ರಾಷ್ಟ್ರಗಳ ನಡುವಿನೆ ಭಿನ್ನಾಭಿಪ್ರಾಯ ಕೊನೆಗೊಳಿಸಲು  "ಹಲವಾರು ಕಾರ್ಯವಿಧಾನದ ಆಯ್ಕೆಗಳ" ಕುರಿತಂತೆ ಮಾತುಕತೆ ನಡೆದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
"ಒಪ್ಪಂದದ ಅನುಸಾರ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ವಿಶ್ವ ಬ್ಯಾಂಕ್ ಎರಡೂ ದೇಶಗಳ ನಡುವೆ ಸಮಾನವಾಗಿ  ಕಾರ್ಯನಿರ್ವಹಿಸುತ್ತಿದೆ. ಭಾರತದ ಕಿಶನ್ ಗಂಗಾ ಯೋಜನೆ ಉದ್ಘಾಟನೆ ಬಗ್ಗೆ ಪಾಕಿಸ್ತಾನ ತನ್ನ ಕಳವಳವನ್ನು ಹಂಚಿಕೊಂಡೀದೆ " ವಿಶ್ವ ಬ್ಯಾಂಕ್ ಹೇಳಿದೆ.
ಜಮ್ಮು ಕಾಶ್ಮೀರದಲ್ಲಿ 330 ಮೆಗಾವಾಟ್ ಸಾಮರ್ಥ್ಯದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯನ್ನು ಪ್ರಧಾನಿ ಮೋದಿ ಕಳೆದ ವಾರ ಉದ್ಘಾಟಿಸಿದ್ದರು. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆದು ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಈ ಯೋಜನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com