ಲಂಕಾ ಸಂಸತ್ ಕಲಾಪ ರದ್ದು ಆದೇಶ ವಾಪಸ್ ಪಡೆದ ಅಧ್ಯಕ್ಷ ಸಿರಿಸೇನ: ನ.05 ರಿಂದ ಕಲಾಪ ಮತ್ತೆ ಆರಂಭ

ಲಂಕಾದಲ್ಲಿ ಪ್ರಧಾನಿ ರಾನಿಲ್​ ವಿಕ್ರಮಸಿಂಘೆಯ ಪದಚ್ಯುತಿಯಿಂದ ಉಂಟಾಗಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಂಸತ್ ಕಾರ್ಯಕಲಾಪ ರದ್ದು ಆದೇಶವನ್ನು ಲಂಕಾ ಅಧ್ಯಕ್ಷ ಮೈತ್ರಿಪಾಲ ಹಿಂಪಡೆದಿದ್ದಾರೆ.
ಲಂಕಾ ಸಂಸತ್ ಕಲಾಪ ರದ್ದು ಆದೇಶ ವಾಪಸ್ ಪಡೆದ ಅಧ್ಯಕ್ಷ ಸಿರಿಸೇನ: ನ.05 ರಿಂದ ಕಲಾಪ ಮತ್ತೆ ಆರಂಭ
ಲಂಕಾ ಸಂಸತ್ ಕಲಾಪ ರದ್ದು ಆದೇಶ ವಾಪಸ್ ಪಡೆದ ಅಧ್ಯಕ್ಷ ಸಿರಿಸೇನ: ನ.05 ರಿಂದ ಕಲಾಪ ಮತ್ತೆ ಆರಂಭ
ಕೊಲಂಬೊ: ಲಂಕಾದಲ್ಲಿ ಪ್ರಧಾನಿ ರಾನಿಲ್​ ವಿಕ್ರಮಸಿಂಘೆಯ ಪದಚ್ಯುತಿಯಿಂದ ಉಂಟಾಗಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಸಂಸತ್ ಕಾರ್ಯಕಲಾಪ ರದ್ದು ಆದೇಶವನ್ನು ಲಂಕಾ ಅಧ್ಯಕ್ಷ ಮೈತ್ರಿಪಾಲ ಹಿಂಪಡೆದಿದ್ದಾರೆ. 
ರದ್ದತಿ ಆದೇಶವನ್ನು ವಾಪಸ್ ಪಡೆದಿರುವ ಸಿರಿಸೇನಾ, ನ.೦5 ಕ್ಕೆ ಲಂಕಾ ಸಂಸತ್ ಕಲಾಪಕ್ಕೆ ಕರೆ ನೀಡಿದ್ದಾರೆ. ಪ್ರಧಾನಿ ಹುದ್ದೆ ಸಂಬಂಧ ರಾನಿಲ್​ ವಿಕ್ರಮಸಿಂಘೆ ಹಾಗೂ ರಾಜಪಕ್ಸೆ ಅವರ ನಡುವಿನ ತಿಕ್ಕಾಟ ನ.05 ರ ಕಲಾಪದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸಂಸತ್ ತುರ್ತು ಕಲಾಪವನ್ನು ನವೆಂಬರ್​ 16ರ ವರೆಗೆ ಅಮಾನತುಗೊಳಿಸಿ ಆದೇಶ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com