ಸಂಗ್ರಹ ಚಿತ್ರ
ವಿದೇಶ
ಹಿಂದೂ ಮಹಾಸಾಗರದಲ್ಲಿ ಐಎನ್ಎಸ್ ಅರಿಹಂತ್: ಬೆದರಿದ ಪಾಕ್ ನಿಂದ ವಿಶ್ವಸಮುದಾಯಕ್ಕೆ ಮೊರೆ!
ಹಿಂದೂ ಮಹಾಸಾಗರದಲ್ಲಿ ಭಾರತೀಯ ಸೇನೆ ತನ್ನ ಪ್ರಬಲ ನೌಕೆಗಳಲ್ಲಿ ಒಂದಾದ ಐಎನ್ಎಸ್ ಅರಿಹಂತ್ ಅನ್ನು ನಿಯೋಜನೆ ಮಾಡಿರುವ ಬೆನ್ನಲ್ಲೇ ಬೆದರಿರುವ ಪಾಕಿಸ್ತಾನ ವಿಶ್ವಸಮುದಾಯದ ಮುಂದೆ ಮೊರೆ ಇಟ್ಟಿದೆ.
ಇಸ್ಲಾಮಾಬಾದ್: ಹಿಂದೂ ಮಹಾಸಾಗರದಲ್ಲಿ ಭಾರತೀಯ ಸೇನೆ ತನ್ನ ಪ್ರಬಲ ನೌಕೆಗಳಲ್ಲಿ ಒಂದಾದ ಐಎನ್ಎಸ್ ಅರಿಹಂತ್ ಅನ್ನು ನಿಯೋಜನೆ ಮಾಡಿರುವ ಬೆನ್ನಲ್ಲೇ ಬೆದರಿರುವ ಪಾಕಿಸ್ತಾನ ವಿಶ್ವಸಮುದಾಯದ ಮುಂದೆ ಮೊರೆ ಇಟ್ಟಿದೆ.
ಭಾರತದ ಈ ನಡೆ ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ ಇಡೀ ದಕ್ಷಿಣ ಏಷ್ಯಾದ ಮೇಲೆ ಹಿಡಿತ ಸಾಧಿಸುವ ಬೆದರಿಕೆಯಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಮಹಮದ್ ಫೈಸಲ್ ಅವರು, 'ದಕ್ಷಿಣ ಏಷ್ಯಾ ಸಮುದ್ರದಲ್ಲಿ ಭಾರತ ತನ್ನ ಜಲಾಂತರ್ಗಾಮಿ ನೌಕೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಿದೆ. ಇದು ಖಂಡಿತ ತನ್ನ ನೆರೆ ಹೊರೆಯ ದೇಶಗಳನ್ನು ಬೆದರಿಸುವ ತಂತ್ರಗಾರಿಕೆಯಾಗಿದ್ದು, ಕೇವಲ ಹಿಂದೂ ಮಹಾಸಾಗರ ಮಾತ್ರವಲ್ಲ ಬದಲಿಗೆ ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ ಇತರೆ ದೇಶಗಳಿಗೂ ಆತಂಕ ಉಂಟು ಮಾಡಿದೆ. ಈ ಬಗ್ಗೆ ವಿಶ್ವ ಸಮುದಾಯ ಗನಮ ಹರಿಸಬೇಕಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತೀಯ ನೌಕದಳಕ್ಕೆ ಅಣ್ವಸ್ತ್ರ ಸಾಮರ್ಥ್ಯದ ಐಎನ್ಎಸ್ ಅರಿಹಂತ್ ಅನ್ನು ಸೇರ್ಪಡೆ ಮಾಡಿಕೊಂಡಿತ್ತು. ಅಲ್ಲದೆ ನೌಕೆ ತನ್ನ ಮೊದಲ ವಿಚಕ್ಷಣ ಕಾರ್ಯವನ್ನೂ ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ