ಸೊಮಾಲಿಯಾದಲ್ಲಿ ಉಗ್ರರ ದಾಳಿ: ಕಾರು ಬಾಂಬ್​ ಸ್ಫೋಟ, ಗುಂಡಿನ ದಾಳಿಗೆ 52 ಮಂದಿ ಸಾವು

ಸೊಮಾಲಿಯಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರು ಬಾಂಬ್​ ದಾಳಿಯಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮೊಗದಿಶು: ಸೊಮಾಲಿಯಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರು ಬಾಂಬ್​ ದಾಳಿಯಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ.
ಮೊಗದಿಶುವಿನ ಸಹಾಫಿ ಹೋಟೆಲ್​ ಬಳಿ ಕೇವಲ ಒಂದು ನಿಮಿಷದ ಅವಧಿಯಲ್ಲಿ ಎರಡು ಬಾಂಬ್ ಗಳು ಸ್ಫೋಟಿಸಿವೆ. ಈ ಹೋಟೆಲ್​ ಸೋಮಾಲಿಯಾ ಪೊಲೀಸ್​ ಫೋರ್ಸ್​ನ ಸಿಐಡಿ ಮುಖ್ಯಕಚೇರಿ ಸಮೀಪವೇ ಇದ್ದು, ನಾಲ್ವರು ಉಗ್ರರು ಒಮ್ಮೆಲೇ ಹೋಟೆಲ್​ ನ ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಕೆಳಗೆ ಕುಳಿತಿರುವ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಉಗ್ರರನ್ನು ಹತ್ಯೆಗೈದು ಹೋಟೆಲ್​ ರೂಮಿನಲ್ಲಿದ್ದವರನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಬಳಿಕ ಹೋಟೆಲ್​ ಬಳಿಯೇ ಎರಡು ಬಾಂಬ್ ಗಳು ಸ್ಫೋಟಗೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದು ಅಲ್-ಶಬಾಬ್​ ಉಗ್ರಸಂಘಟನೆಯ ಕೃತ್ಯ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ ಎಂದು ಸೋಮಾಲಿಯಾ ಸರ್ಕಾರ ಹೇಳಿದೆ. 2011ರಲ್ಲಿ ಅಲ್​ ಶಬಾಬ್ ಸಂಘಟನೆಯನ್ನು ಮೊಗದಿಶು ಪ್ರದೇಶದಿಂದ ಬಲವಂತವಾಗಿ ಹೊರಹಾಕಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com