ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ವೈಫಲ್ಯಕ್ಕೆ ಪಾಕಿಸ್ತಾನವನ್ನು ಬಲಿಪಶು ಮಾಡುವ ಬದಲು, ತಾಲಿಬಾನ್ ಹಿಂದೆಂದಿಗಿಂತಲೂ ಏಕೆ ಬಲಿಷ್ಠವಾಗಿದೆ ಎಂಬುದನ್ನು ಅಮೆರಿಕ ಅರಿಯಬೇಕಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುತ್ತಿದ್ದ ಆರ್ಥಿಕ ನೆರವಿಗೆ ಕಡಿವಾಣ ಹಾಕಿರುವ ಕ್ರಮವನ್ನು ಸಮರ್ಥನೆ ಮಾಡಿಕೊಂಡು ಟ್ರಂಪ್ ಟ್ವೀಟ್ ಮಾಡಿದ ಬೆನ್ನಲ್ಲೆ ಇಮ್ರಾನ್ ಖಾನ್ ಸಹ ಟ್ವೀಟ್ ಮಾಡಿದ್ದು, ಪಾಕ್ ವಿರುದ್ಧ ಟ್ರಂಪ್ ಆರೋಪಗಳಿಗೆ ನೇರವಾಗಿ ದಾಖಲೆಗಳನ್ನು ನೀಡಬೇಕಿದೆ. 9/11 ದಾಳಿಯಲ್ಲಿ ಯಾವುದೇ ಪಾಕಿಸ್ತಾನಿಯೂ ಇಲ್ಲದೇ ಇದ್ದರೂ ಸಹ ಅಮೆರಿಕ ಭಯೋತ್ಪಾದನೆ ವಿರುದ್ಧ ನಡೆಸಿದ್ದ ಹೋರಾಟದಲ್ಲಿ ಪಾಕ್ ಸಹ ಕೈ ಜೋಡಿಸಲು ನಿರ್ಧರಿಸಿತ್ತು. ಈ ಹಂತದಲ್ಲಿ ಪಾಕಿಸ್ತಾನ ಸಹ 75,000 ಸಾವು-ನೋವುಗಳನ್ನು ಕಂಡಿದ್ದು, 123 ಬಿಲಿಯನ್ ಡಾಲರ್ ನಷ್ಟು ಹಣವನ್ನೂ ಕಳೆದುಕೊಂಡಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.