ದುಬೈ: ಮಹಿಳೆಯೊಬ್ಬಳು ಮಾಜಿ ಪ್ರಿಯಕರನೊಬ್ಬನನ್ನು ಕೊಂದು ಆತನ ದೇಹವನ್ನು ತುಂಡರಿಸಿ ಮಾಂಸವನ್ನು ಬೇಯಿಸಿ ಅಕ್ಕಿಯೊಡನೆ ಬೆರೆಸಿ ಪಾಕಿಸ್ತಾನ ಮೂಲದ ತನ್ನ ಮನೆಗೆಲಸದವರಿಗೆ ಊಟಕ್ಕೆ ಬಡಿಸಿರುವ ಅಮಾನುಷ ಘಟನೆ ಯುಎಇ ನ ಅಬುದಾಬಿಯಲ್ಲಿ ನಡೆದಿದೆ.
ಅಲ್ ಎನ್ (30) ಎಂಬ ಮಹಿಳೆ ತಾನೇ ತನ್ನ ಪ್ರಿಯಕರನ ದೇಹವನ್ನು ತುಂಡರಿಸಿ ಅದನ್ನು ಖಾದ್ಯದೊಡನೆ ಬೆರೆಸಿ ಪಾಕಿಸ್ತಾನಿ ಮೂಲದ ಕೆಲಸಗಾರರಿಗೆ ನಿಡಿದ್ದಾಗಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾಳೆ.
ಕೊಲೆಗೀಡಾದ ಪ್ರಿಯಕರ ಹಾಗೂ ಆಲ್ ಎನ್ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಆದರೆ ಕಳೆದ ಕೆಲ ದಿನಗಳಿಂದ ಯುವಕ ಈಕೆಯಿಂದ ಬೇರಾಗಿದ್ದಲ್ಲದೆ ಬೇರೊಬ್ಬ ಮಹಿಳೆಯೊಡನೆ ಓಡಾಡುತ್ತಿದ್ದ. ಇದರಿಂದ ಕೋಪಗೊಂಡ ಆಲ್ ಎನ್ ಆತನಿಗೆ ಬುದ್ದಿ ಕಲಿಸಲು ಈ ಭೀಕರ ಕೃತ್ಯ ಎಸಗಿದ್ದಾಳೆ.
ತಾನು ಪ್ರಿಯಕರನ ದೇಹ ಬಳಸಿ ತಯಾರಿಸಿದ ಖಾದ್ಯವನ್ನು ಕೆಲಸದವರಿಗೆ ಹಂಚಿದ ಬಳಿಕ ಉಳಿದ ಕೆಲ ತುಣುಕುಗಳನ್ನು ಬೀದಿಯಲ್ಲಿದ್ದ ನಾಯಿಗಳಿಗೆ ಎಸೆದಿದ್ದಳು.
ಅಪರಾಧ ಕೃತ್ಯ ನಡೆದು ಅದಾಗಲೇ ತಿಂಗಳು ಉರುಳಿದ್ದರೂ ಇತ್ತೀಚೆಗೆ ಮೃತನ ಸೋದರೆಅ ಯುವಕನನ್ನು ಹುಡುಕಿ ಆಕೆಯ ಮನೆಗೆ ಧಾವಿಸಿದಾಗಷ್ಟೇ ಬೆಳಕಿಗೆ ಬಂದಿದೆ.
ಮೊದಲಿಗೆ ಯುವಕನ ಸೋದರ ಆಗಮಿಸಿದಾಗ ಆರೋಪಿ ತನಗೇನೂ ತಿಳಿದಿಲ್ಲ ಎಂದಿದ್ದಾಳೆ. ಯುವಕನು ಬೇರೊಬ್ಬಳೊಡನೆ ಪ್ರೇಮ ಸಂಬಂಧ ಇರಿಸಿಕೊಂಡ ಬಳಿಕ ತನ್ನಿಂದ ದೂರಾದನೆಂದು ಆಕೆ ಹೇಳಿದ್ದಾಳೆ. ಆದರೆ ಆಕೆಯ ಅಡಿಗೆ ಮನೆಯ ಮಿಕ್ಸಿ ಬಳಿ ಸಿಕ್ಕಿದ ಮೃತನ ಹಲ್ಲಿನಿಂದಾಗಿ ಪ್ರಕರಣ ಬಯಲಾಗಿದೆ.
ವಿಚಾರಣೆ ವೇಳೆ ತಾನು ಕೃತ್ಯ ನಡೆಸಿದ ತರುವಾಯ ಅಪಾರ್ಟ್ ಮೆಂಟ್ ಸ್ವಚ್ಚಗೊಳಿಸಲು ಸ್ನೇಹಿತನಿಂದ ಸಹಾಯ ಪಡೆದುಕೊಂಡಳು ಎಂದು ಅವಳು ಹೇಳಿದ್ದಾಳೆ.