ಭಾರತದೊಂದಿಗೆ ರಫೆಲ್ ಯುದ್ಧ ವಿಮಾನ ಒಪ್ಪಂದ: ಸ್ಪಷ್ಟನೆ ಕೋರಿ ಫ್ರಾನ್ಸ್ ಎನ್ ಜಿಒ ದೂರು

ಭಾರತದೊಂದಿಗೆ ಮಾಡಿಕೊಂಡಿರುವ 36 ರಫೆಲ್ ಯುದ್ಧ ವಿಮಾನ ಒಪ್ಪಂದ ಯಾವ ಷರತ್ತಿನ ಆಧಾರದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ಯಾರಿಸ್: ಭಾರತದೊಂದಿಗೆ ಮಾಡಿಕೊಂಡಿರುವ 36 ರಫೆಲ್ ಯುದ್ಧ ವಿಮಾನ ಒಪ್ಪಂದ ಯಾವ ಷರತ್ತಿನ ಆಧಾರದ ಮೇಲೆ ಮಾಡಿಕೊಳ್ಳಲಾಗಿದೆ ಮತ್ತು ಫ್ರಾನ್ಸ್ ನ ಡಸ್ಸೌಲ್ಟ್ ವಿಮಾನಯಾನ ಸಂಸ್ಥೆಯ ಜೊತೆಗೆ ವಿಮಾನ ತಯಾರಿಯಲ್ಲಿ ಭಾರತದಿಂದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆರ್ಥಿಕ ಅಪರಾಧಗಳ ವಿರುದ್ಧ ಹೋರಾಡುತ್ತಿರುವ ಫ್ರಾನ್ಸ್ ನ ಸರ್ಕಾರೇತರ ಸಂಘಟನೆ ಅಲ್ಲಿನ ಆರ್ಥಿಕ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ದೂರು ದಾಖಲಿಸಿದೆ.

ಫ್ರಾನ್ಸ್ ನ ಮಾಜಿ ಸಚಿವ ಮತ್ತು ಭ್ರಷ್ಟಾಚಾರ-ವಿರೋಧಿ ವಕೀಲರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ "ಅಧಿಕಾರಿಗಳ ದುರ್ಬಳಕೆ" ಮತ್ತು ರಾಫೆಲ್ ಮಾರಾಟಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆಸಿವೆ ಎಂದು ಮೆಡಿಯಪರ್ಟ್ ಮತ್ತು ಶೆರ್ಪಾ ತನಿಖೆಯಿಂದ ಬಹಿರಂಗಗೊಂಡಿವೆ ಎಂದು ಶೆರ್ಪಾ ಸರ್ಕಾರೇತರ ಸಂಘಟನೆ ದೂರಿನಲ್ಲಿ ಹೇಳಿದೆ.

ರಫೆಲ್ ಯುದ್ಧ ವಿಮಾನ ಒಪ್ಪಂದ ವೇಳೆ ಸಂಭಾವ್ಯ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯಿದ್ದು, ರಾಷ್ಟ್ರೀಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ಈ ಆರೋಪದ ಕುರಿತು ಕೂಲಂಕಷ, ನಿಸ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಇತ್ತ ಭಾರತದಲ್ಲಿ ಕಾಂಗ್ರೆಸ್ ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಹಗರಣ ನಡೆದಿದೆ, ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸುತ್ತಿರುವಾಗಲೇ ಫ್ರಾನ್ಸ್ ನಲ್ಲಿ ಕೂಡ ಅಪಸ್ವರ ಎದ್ದಿರುವುದು ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com