ಸುಮಾರು 14 ಬಿಲಿಯನ್ ರೂಪಾಯಿ ಮೌಲ್ಯದ ವಸತಿ ಹಗರಣದ ತನಿಖೆ ನಡೆಸುತ್ತಿದ್ದ ಭ್ರಷ್ಟಾಚರ ನಿಗ್ರಹ ವಿಭಾಗ ಶೆಹಬಾಜ್ ಷರೀಫ್ ನ್ನು ಬಂಧಿಸಿದೆ. ಈ ಬಗ್ಗೆ ನ್ಯಾಷನಲ್ ಅಕೌಂಟೆಬಲಿಟಿ ಬ್ಯೂರೋ(ಎನ್ಎಬಿ) ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ಸಂಸತ್ ನಲ್ಲಿ ವಿಪಕ್ಷ ನಾಯಕನಾಗಿರುವ ಶೆಹಬಾಜ್ ಷರೀಫ್ ಅವರು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾಗ ಲಾಹೋರ್ ನಲ್ಲಿ ಅಶಿಯಾನಾ ವಸತಿ ಯೋಜನೆಯಲ್ಲಿ ಅಕ್ರಮಗಳನ್ನು ಎಸಗಿರುವ ಆರೋಪ ಕೇಳಿಬಂದಿದೆ.