ಮೂತ್ರಾಭಿಷೇಕ!... ನ್ಯೂಯಾರ್ಕ್ ನಲ್ಲಿ ಸದ್ದು ಮಾಡುತ್ತಿವೆ ಟ್ರಂಪ್ ಪ್ರತಿಮೆಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಲ್ಲಿನ ಲಿಬರಲ್ ಗಳು ಅನೇಕ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.
ಟ್ರಂಪ್
ಟ್ರಂಪ್
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಲ್ಲಿನ ಲಿಬರಲ್ ಗಳು ಅನೇಕ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ಈಗ ನ್ಯೂಯಾರ್ಕ್ ನಲ್ಲಿ ಟ್ರಂಪ್ ವಿರುದ್ಧ ಅಸಮಾಧಾನ ಹೊರಹಾಕುವುದಕ್ಕೆ ವಿನೂತನ ರೀತಿಯ ಪ್ರತಿಭಟನೆ ಪ್ರಾರಂಭವಾಗಿದೆ.
ಜಾಹಿರಾತು ವೃತ್ತಿಪರರಾಗಿರುವ ಫಿಲ್ ಗೇಬಲ್, ನ್ಯೂಯಾರ್ಕ್ ನ  ಬ್ರೂಕ್ಲಿನ್ ಸೈಡ್ ವಾಕ್ಸ್ ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರತಿಮೆ (1980 ರಲ್ಲಿ ಡೊನಾಲ್ಡ್ ಟ್ರಂಪ್ ಇದ್ದ ರೀತಿಯಲ್ಲಿ ನಿರ್ಮಿಸಲಾಗಿದೆ)ಯನ್ನು ಇಟ್ಟಿದ್ದು, ಆ ಪ್ರತಿಮೆ  "ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿ" ಎನ್ನುವ ಸಂದೇಶ ಹೊಂದಿದೆ. 
ನಾವು ಅಸಹ್ಯಪಟ್ಟುಕೊಳ್ಳುವುದನ್ನು ಈ ಮೂಲಕ ತಿಳಿಸಬಹುದು ಎಂಬುದು ಡೊನಾಲ್ಡ್ ಟ್ರಂಪ್ ಪ್ರತಿಮೆಗಳನ್ನು ಇಟ್ಟಿರುವುದರ ಹಿಂದಿನ ಉದ್ದೇಶವಾಗಿದೆ ಎಂದು ಫಿಲ್ ಗೇಬಲ್ ಹೇಳಿದ್ದಾರೆ. ಪ್ರತಿಮೆಗಳನ್ನು ಇಟ್ಟ ನಂತರ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಬೇಕಿತ್ತು. ಈ ವರೆಗೂ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ ಎನ್ನುತ್ತಾರೆ ಗೇಬಲ್
ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಗೇಬಲ್ ಹೇಳಿದರೂ ಸಹ ಬಹುತೇಕ ಜನರು ಇದನ್ನು ಹಾಸ್ಯದ ವಿಷಯವನ್ನಾಗಿ ಪರಿಗಣಿಸಿದ್ದಾರೆ.  ಇದೇ ವೇಳೇ ಟ್ರಂಪ್ ನ ಕೆಲವು ಅಭಿಮಾನಿಗಳು ಇದನ್ನು ಅಧ್ಯಕ್ಷರಿಗೆ ಮಾಡಿರುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com