ಫೇಸ್‍ಬುಕ್‍ ಖಾತೆದಾರರಿಗೆ ಶಾಕಿಂಗ್ ನ್ಯೂಸ್: 29 ಮಿಲಿಯನ್ ಖಾತೆದಾರರ ಖಾಸಗಿ ಡಾಟಾ ಕಳ್ಳತನ!

ಫೇಸ್ ಬುಕ್ ನ ಲೋಪದೋಷಗಳನ್ನು ಬಳಿಸಿಕೊಂಡು ಹ್ಯಾಕರ್ ಗಳು 29 ಮಿಲಿಯನ್ ಫೇಸ್ ಬುಕ್ ಖಾತೆದಾರರ ಖಾಸಗಿ ಡಾಟಾಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಕಳೆದ ತಿಂಗಳು ಹೇಳಿತ್ತು...
ಫೇಸ್ ಬುಕ್
ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೋ: ಫೇಸ್ ಬುಕ್ ನ ಲೋಪದೋಷಗಳನ್ನು ಬಳಿಸಿಕೊಂಡು ಹ್ಯಾಕರ್ ಗಳು 29 ಮಿಲಿಯನ್ ಫೇಸ್ ಬುಕ್ ಖಾತೆದಾರರ ಖಾಸಗಿ ಡಾಟಾಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಕಳೆದ ತಿಂಗಳು ಹೇಳಿತ್ತು. 
ಜಗತ್ತಿನ ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ 50 ಮಿಲಿಯನ್ ಖಾತೆದಾರರ ಫೇಸ್ ಬುಕ್ ಅಕೌಂಟ್ ಸಮಸ್ಯೆಗೀಡಾಗಿದೆ. ಬಳಕೆದಾರರ ಖಾತೆಗಳನ್ನು ತೆರೆಯಲು ಅವಶ್ಯವಾಗಿರುವ ಡಿಜಿಟಲ್ ಕೀ ಎಂದು ಕರೆಯಲಾಗುವ ಆಯಕ್ಸೆಸ್ ಟೋಕನ್ ಗಳನ್ನು ದಾಳಿ ಮೂಲಕ ಕದಿಯುವಲ್ಲಿ ಹ್ಯಾಕರ್ ಗಳು ಯಶಸ್ವಿಯಾಗಿದ್ದಾರೆ. 
ಫೇಸ್ ಬುಕ್ ನ ಭದ್ರತಾ ವ್ಯವಸ್ಥೆಯ ಕೋಡ್ ಗಳಲ್ಲಿನ ಲೋಪವನ್ನು ಬಳಿಸಿಕೊಂಡು ಹ್ಯಾಕರ್ ಗಳು ಈ ಕತ್ಯ ಎಸಗಿದ್ದಾರೆ ಎಂದು ಕಂಪನಿಯ ಪ್ರಾಡಕ್ಟ್ ಮ್ಯಾನೇಜ ಮೆಂಟ್ ವಿಭಾಗ ಉಪಾಧ್ಯಕ್ಷ ಗೈ ರೋಸೆನ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com