ತಫ್ಟ್(ಟೆಕ್ಸಾಸ್): ಮಗುವಿನ ಮೊದಲ ವರ್ಷದ ಹುತ್ಟುಹಬ್ಬ ಸಮಾರಂಬ ಆಚರಣೆ ವೇಳೆ ನಡೆದ ಶೂಟೌಟ್ ವೇಳೆ ನಾಲ್ಕು ಜನ ಸತ್ತು ಒಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಅಮೆರಿಕಾದ ದಕ್ಷಿಣ ಟೆಕ್ಸಾಸ್ ನಲ್ಲಿ ನಡೆದಿದೆ.
ಶನಿವಾರ ಸಂಜೆ ಐದರ ಸಮಯದಲ್ಲಿ ತಫ್ಟ್ ನಲ್ಲಿ ಈ ಘಟನೆ ನಡೆದಿದೆ ಎಂದು ಟೆಕ್ಸಾಸ್ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಸೇಫ್ಟಿ ಹೇಳಿಕೆ ನೀಡಿದೆ.
ಹುಟ್ಟುಹಬ್ಬದ ಸಮಾರಂಬಕ್ಕೆ ಹಾಜರಾಗಿದ್ದ ಎರಡು ಕುಟುಂಬಗಳ ನಡುವೆ ಉಂಟಾದ ವಾಗ್ವಾದವು ನಾಲ್ವರ ಹತ್ಯೆಯೊಡನೆ ಮುಕ್ತಾಯವಾಗಿದೆ.
ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಕಾರ್ಪಸ್ ಕ್ರಿಸ್ಟಿ ಆಸ್ಪತ್ರೆಗೆದಾಕಲಿಸಲಾಗಿದ್ದು ಅವರ ಸ್ಥಿತಿಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭಿಸಿಲ್ಲ.
ಇಬ್ಬರು ಶಂಕಿತರು ಪಾರಾರಿಯಾಗಿದ್ದು ಘಟನೆ ಕ್ರಿತು ಇನಾವ ವಿವರಗಳೂ ಲಭ್ಯವಾಗಿಲ್ಲ ಎಂದು ತನಿಕಾಧಿಕಾರಿಗಳು ಹೇಳಿದ್ದಾರೆ.