ಚೀನಾಗೆ ನಾನು ಅಮೆರಿಕ ಅಧ್ಯಕ್ಷನಾಗಿರುವುದು ಬೇಕಿಲ್ಲ. ಆದ್ದರಿಂದ ಚೀನಾ ಈ ಹಿಂದಿನ ಚುನಾವಣೆಯಲ್ಲಿಯೂ ಹಸ್ತಕ್ಷೇಪ ಮಾಡಿತ್ತು. ಈಗ 2018 ರ ಮಧ್ಯಂತರ ಚುನಾವಣೆಗಳಲ್ಲಿಯೂ ಚೀನಾ ಹಸ್ತಕ್ಷೇಪ ಮಾಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಹಸ್ತಕ್ಷೇಪದ ಪಾತ್ರವನ್ನು ಟ್ರಂಪ್ ಬಹಿರಂಗಪಡಿಸಿದ್ದಾರೆ. ಕಳೆದ ತಿಂಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದ ಟ್ರಂಪ್ 2018 ರ ಅಮೆರಿಕ ಮಧ್ಯಂತರ ಚುನಾವಣೆಗಳಲ್ಲಿ ಚೀನಾ ಮಧ್ಯಪ್ರವೇಶಿಸಲು ಯತ್ನಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು.