ದುಬೈಯ ಲಾಟರಿ ಟಿಕೆಟ್ ನಲ್ಲಿ ಕೋಟ್ಯಂತರ ಹಣ ಗೆದ್ದ ಭಾರತೀಯ!

ದುಬೈಯ ಲಾಟರಿಯಲ್ಲಿ ನಿನ್ನೆ ಭಾರತೀಯ ಮೂಲದ ಪ್ರಜೆ 1 ಮಿಲಿಯನ್ ಡಾಲರ್ (7,32,57,500 ಭಾರತೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದುಬೈ: ದುಬೈಯ ಲಾಟರಿಯಲ್ಲಿ ನಿನ್ನೆ ಭಾರತೀಯ ಮೂಲದ ಪ್ರಜೆ 1 ಮಿಲಿಯನ್ ಡಾಲರ್ (7,32,57,500 ಭಾರತೀಯ ರೂಪಾಯಿ) ಗೆದ್ದು ಜಾಕ್ ಪಾಟ್ ಹೊಡೆದಿದ್ದಾರೆ. ಅದನ್ನು ದುಬೈ ಡ್ಯೂಟಿ ಫ್ರೀ ರಫ್ಲ್ ಎಂದು ಕರೆಯಲಾಗುತ್ತದೆ.
 
45 ವರ್ಷದ ಸೌರವ್ ದೇ ಕಳೆದ 6 ವರ್ಷಗಳಿಂದ ದುಬೈಯಲ್ಲಿ ನೆಲೆಸಿದ್ದು ವಿಮಾ ಕಂಪೆನಿಯ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಲ್ಲಿನ ಪತ್ರಿಕೆ ಖಲೀಜ್ ಟೈಮ್ಸ್ ವರದಿ ಮಾಡಿದೆ.

ದುಬೈ ಡ್ಯೂಟಿ ಫ್ರೀಯ ಟಿಕೆಟ್ ನ್ನು ಮೊದಲ ಬಾರಿಗೆ ಖರೀದಿಸಿದ್ದರಲ್ಲಿಯೇ ಅವರು ಈ ಹಣ ಗೆದ್ದುಕೊಂಡಿದ್ದಾರೆ. ಕಳೆದ ತಿಂಗಳು ಸೆಪ್ಟೆಂಬರ್ ನಲ್ಲಿ ರಜೆಗೆಂದು ಕೋಲ್ಕತ್ತಾಗೆ ಬರುತ್ತಿದ್ದಾಗ ಟಿಕೆಟ್ ಖರೀದಿಸಿದ್ದರು.

ಈ ಹಣ ಸಂಪಾದನೆಯಿಂದ ನನಗೆ ಮತ್ತು ನನ್ನ ಕುಟುಂಬದವರಿಗೆ ದೊಡ್ಡ ಆಸ್ತಿ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಭಾರತೀಯ ಸೇರಿ ಇಬ್ಬರು ಐಷಾರಾಮಿ ವಾಹನಗಳನ್ನು ಗಳಿಸಿದ್ದಾರೆ.

ಅವರಲ್ಲಿ 44 ವರ್ಷದ ಭಾರತೀಯ ಬಿಎಂಡಬ್ಲ್ಯು ಆರ್ 1200 ಆರ್ ಟಿ ಬೈಕ್ ಮತ್ತು 40 ವರ್ಷದ ಶ್ರೀಲಂಕಾ ಪ್ರಜೆ ಸಜೀವ ನಿರಂಜನ್ ರೇಂಜ್ ರೋವರ್ ಹೆಚ್ ಎಸ್ ಇ 380 ಹೆಚ್ ಪಿ ಗೆದ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com