ಹಿಲರಿ ಕ್ಲಿಂಟನ್, ಒಬಾಮಾ ಮನೆಗೆ ಶಂಕಿತ ಸ್ಪೋಟಕದ ಪಾರ್ಸಲ್: ಅಮೆರಿಕಾ ಗುಪ್ತದಳ ತನಿಖೆ

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗು ಮಾಜಿ ಸೆಕ್ರೆಟರ್ ಆಫ್ ಸ್ಟೇಟ್ ಹಿಲರಿ ಕ್ಲಿಂಟನ್ ಅವರ ಮನೆಗಳಿಗೆ ಕಳಿಸಲಾಗಿದ್ದ ಶಂಕಿತ ಸ್ಪೋಟಕಗಳಿದ್ದ ಪಾರ್ಸಲ್ ಗಳನ್ನು....
ಹಿಲರಿ ಕ್ಲಿಂಟನ್, ಬರಾಕ್ ಒಬಾಮ
ಹಿಲರಿ ಕ್ಲಿಂಟನ್, ಬರಾಕ್ ಒಬಾಮ
ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗು ಮಾಜಿ ಸೆಕ್ರೆಟರ್ ಆಫ್ ಸ್ಟೇಟ್ ಹಿಲರಿ ಕ್ಲಿಂಟನ್ ಅವರ ಮನೆಗಳಿಗೆ ಕಳಿಸಲಾಗಿದ್ದ ಶಂಕಿತ ಸ್ಪೋಟಕಗಳಿದ್ದ ಪಾರ್ಸಲ್  ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್  (ಅಮೆರಿಕಾ ಗುಪ್ತ ದಳ) ಹೇಳಿದೆ.
ನಿನ್ನೆ(ಮಂಗಳವಾರ) ನ್ಯೂಯಾರ್ಕ್ ನ ವೆಸ್ಟ್ ಚೆಸ್ಟರ್ ನಲ್ಲಿರುವ ಕ್ಲಿಂಟನ್ ಮನೆ ವಿಳಾಸಕ್ಕೆ ಬಂದಿದ್ದ ಒಂದು ಪಾರ್ಸಲ್ ವಶಕ್ಕೆ ಪಡೆಯಲಾಗಿದೆ.
ಬುಧವಾರ ಮುಂಜಾನೆ ವಾಷಿಂಗ್ಟನ್ ನಲ್ಲಿರುವ ಬರಾಕ್ ಒಬಾಮಾ ಅಮನೆ ವಿಳಾಸಕ್ಕೆ ಸಹ ಒಂದು ಶಂಕಿತ ಪಾರ್ಸಲ್ ಬಂದಿರುವುದು ಪತ್ತೆಯಾಗಿದೆ.
ಪಾರ್ಸಲ್ ಗಳಲ್ಲಿ ಶಂಕಿತ ಸ್ಪೋಟಕಗಳಿರಬಹುದು ಹಾಗಾಗಿ ಇದೇ ನಿಟ್ಟಿನಲ್ಲಿ ತನಿಖೆ ನಡೆದಿದೆ ಎಂದು ಅಮೆರಿಕಾ ಗುಪ್ತದಳ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಾರ್ಸಲ್ ಗಳನ್ನು ಅವರ ಮನೆಗಳಿಗೆ ತಲುಪಿಸಿಲ್ಲ, ಹಾಗಾಗಿ ಅಪಾಯದ ಸಂಭಾವ್ಯತೆ ಇಲ್ಲ. ಪಾರ್ಸಲ್ ಗಳ ಮೂಲ ಪತ್ತೆಹಚ್ಚಲು, ಇದನ್ನು ಕಳಿಸಿದವರ ಬಗೆಗೆ ಮಾಹಿತಿ ತಿಳಿಯಲು  ಕ್ರಿಮಿನಲ್ ತನಿಖೆ ಕೈಗೊಂಡಿರುವುದಾಗಿ ತನಿಖಾ ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com