2+2 ಮಾತುಕತೆಗೆ ಚಾಲನೆ ನೀಡಲಿರುವ ಭಾರತ- ಜಪಾನ್!

ಭಾರತ ಮತ್ತು ಜಪಾನ್ ನಡುವಣ ಸಂಬಂಧ ಮತ್ತಷ್ಟು ವೃದ್ಧಿಗೊಳಿಸುವ ಮಹತ್ತರ ರಾಜತಾಂತ್ರಿಕ ಹೆಜ್ಜೆಗೆ ಉಭಯ ರಾಷ್ಟ್ರಗಳ ಸಚಿವಾಲಯಗಳು ಮುಂದಾಗಿವೆ.
2+2 ಮಾತುಕತೆಗೆ ಚಾಲನೆ ನೀಡಲಿರುವ ಭಾರತ- ಜಪಾನ್!
2+2 ಮಾತುಕತೆಗೆ ಚಾಲನೆ ನೀಡಲಿರುವ ಭಾರತ- ಜಪಾನ್!
Updated on
ಟೋಕಿಯೋ: ಭಾರತ ಮತ್ತು ಜಪಾನ್ ನಡುವಣ ಸಂಬಂಧ ಮತ್ತಷ್ಟು ವೃದ್ಧಿಗೊಳಿಸುವ ಮಹತ್ತರ ರಾಜತಾಂತ್ರಿಕ ಹೆಜ್ಜೆಗೆ ಉಭಯ ರಾಷ್ಟ್ರಗಳ ಸಚಿವಾಲಯಗಳು ಮುಂದಾಗಿವೆ. 
ದ್ವಿಪಕ್ಷೀಯ ಸಂಬಂಧ ವೃದ್ಧಿಗೊಳಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ತೀರ್ಮಾನಿಸಿದ್ದು, 2+2 ಮಾತುಕತೆಗೆ ಶೀಘ್ರವೇ ಚಾಲನೆ ನೀಡಲು ನಿರ್ಧರಿಸಿದ್ದಾರೆ.  ಭಾರತ-ಜಪಾನ್ ನಡುವೆ ಪರಸ್ಪರ ಸಹಕಾರವಿಲ್ಲದೇ 21 ನೇ ಶತಮಾನ ಏಷ್ಯದ ಶತಮಾನವಾಗುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 
ಜಪಾನ್-ಭಾರತದ ರಕ್ಷಣಾ ಸಚಿವರು ಹಾಗೂ ವಿದೇಶಾಂಗ ಸಚಿವರ ನಡುವೆ 2+2 ಮಾತುಕತೆ ನಡೆಸುವುದಕ್ಕೆ ಶಿಂಜೋ ಅಬೆ ಹಾಗೂ ನಾನು ನಿರ್ಧರಿಸಿದ್ದೇವೆ ಎಂದು ಮೋದಿ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳಷ್ಟೇ ಭಾರತ ಅಮೆರೆಕಾದೊಂದಿಗೆ 2+2 ಮಾತುಕತೆಯನ್ನು ಪ್ರಾರಂಭಿಸಿತ್ತು. ಈಗ ಜಗತ್ತಿನ ಮತ್ತೊಂದು ಪ್ರಮುಖ ರಾಷ್ಟ್ರದೊಂದಿಗೆ ಭಾರತ 2+2 ಪ್ರಾರಂಭಿಸುವ ಮೂಲಕ ಮಹತ್ವದ ರಾಜತಾಂತ್ರಿಕ ಹೆಜ್ಜೆ ಇಡುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com