ಜಕಾರ್ತ: ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ ಇಂಡೋನೇಶ್ಯದ ಲಯನ್ ಜೆಟ್ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ಧ್ವಂಸಗೊಂಡಿರುವ ಅದರ ಫ್ಯೂಸ್ ಲೇಜ್ ಪತ್ತೆಯಾಗಿರುವುದಾಗಿ ಇಂಡೋನೇಶ್ಯದ ಮಿಲಿಟರಿ ಮುಖ್ಯಸ್ಥ ಹದಿ ತಜಾಂತೋ ಹೇಳಿದ್ದಾರೆ.
ಬೋಯಿಂಗ್ 737 ಮ್ಯಾಕ್ಸ್ ಪ್ಲೇನ್ ನ ಫ್ಯೂಸ್ ಲೇಜ್ ಅವಶೇಷಗಳು ಬಿದ್ದಿರುವ ತಾಣವನ್ನು ಸೋನಾರ್ ತಾಂತ್ರಿಕತೆಯಿಂದ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಬೋಯಿಂಗ್ 737 ವಿಮಾನದ ಜೆಟಿ 610 ಫ್ಯೂಸ್ ಲೇಜ್ ಪತ್ತೆಯಾಗಿರುವ ಬಗ್ಗೆ ನಮಗೆ ವಿಶ್ವಾಸವಿದೆ. ಸಂಜೆ 7 ಗಂಟೆಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದೆ.
ರಕ್ಷಣಾ ಸಿಬ್ಬಂದಿ ಸುಮಾರು 30-40 ಮೀಟರ್ ಆಳದಲ್ಲಿ ವಿಮಾನದ ಅವಶೇಷಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.