ಕ್ಷಿಪಣಿ ಸಂಬಂಧಿತ ಚಟುವಟಿಕೆ ನಡೆಸುವ ಎರಡು ಪಾಕ್ ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ

ಪರಮಾಣು ಮತ್ತು ಕ್ಷಿಪಣಿ ವ್ಯಾಪಾರಕ್ಕೆ ಸಂಬಂಧಿಸಿದ ಚಟುವಟಿಕೆ ಸಂಬಂಧಿಸಿ ರಫ್ತು ಘಟಕಗಳ ಪಟ್ಟಿಯಲ್ಲಿದ್ದ ಎರಡು ಪಾಕಿಸ್ತಾನ ಸಂಸ್ಥೆಗಲಮೇಲೆ ಅಮೇರಿಕಾ ನಿರ್ಬಂಧ ವಿಧಿಸಿದೆ.\
ಕ್ಷಿಪಣಿ ಸಂಬಂಧಿತ ಚಟುವಟಿಕೆ ನಡೆಸುವ ಎರಡು ಪಾಕ್ ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ
ಕ್ಷಿಪಣಿ ಸಂಬಂಧಿತ ಚಟುವಟಿಕೆ ನಡೆಸುವ ಎರಡು ಪಾಕ್ ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ
ವಾಷಿಂಗ್ ಟನ್: ಪರಮಾಣು ಮತ್ತು ಕ್ಷಿಪಣಿ ವ್ಯಾಪಾರಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಸುವ ರಫ್ತು ಘಟಕಗಳ ಪಟ್ಟಿಯಲ್ಲಿದ್ದ ಎರಡು ಪಾಕಿಸ್ತಾನ ಸಂಸ್ಥೆ ಮೇಲೆ ಅಮೇರಿಕಾ ನಿರ್ಬಂಧ ವಿಧಿಸಿದೆ.
ಟೆಕ್ನಾಲಜಿ ಲಿಂಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟೆಕ್ಕೇರ್ ಸರ್ವಿಸಸ್ ಎಫ್ ಝಡ್ ಗಲ ಮೇಲೆ ಅಮೆರಿಕಾ ನಿರ್ಬಂಧ ಹೇರಿದೆ. ರಫ್ತು ಆಡಳಿತ ನಿಯಂತ್ರಣಗಳು(ಎಕ್ಸ್ ಪೋರ್ಟ್ ಅಡ್ಮಿನಿಸ್ಟ್ರೇಷನ್ ರೆಗ್ಯುಲೇಶನ್ಸ್} ಅಡಿಯಲ್ಲಿ ಈ ಸಂಸ್ಥೆಗಳಿಗೆ ನಿರ್ಬಂಧ ಹಾಕಿದೆ.
ಅಧಿಸೂಚನೆಯಲ್ಲಿ ತಿಳಿಸಿದಂತೆ ಯುಎಸ್ಡಿಪಾರ್ಟ್ ಮೆಂಟ್ ಆಫ್ ಕಾಮರ್ಸ್ ವರದಿಯನುಸಾರ ಇಎಆರ್ ಅನ್ನು ಸರ್ಕಾರವು ನಿಭಾಯಿಸುತ್ತದೆ.ವಿದೇಶಿ ನೀತಿ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾಡಲಾಗುವ ಸಂಸ್ಥೆಗಳ ಮೇಲೆ ಇದು ನಿರ್ಬಂಧ ವಿಧಿಸಬಹುದಾಗಿದೆ.
ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪೆಯೊ ಪಾಕ್ ಗೆ ಭೇಟಿ ನೀಡಲು ಕೆಲವೇ ದಿನಗಳಿರುವಾಗ ಈ ಕ್ರಮಕ್ಕೆ ಯುಎಸ್ ಮುಂದಾಗಿರುವುದು ಗಮನಾರ್ಹ.
ಇಎಆರ್ ಹೇಳಿದಂತೆ ಟೆಕ್ನಾಲಜಿ ಲಿಂಕ್ಸ್ ಪ್ರೈವೇಟ್ ಲಿಮಿಟೆಡ್ ಪಾಕ್ ನಲ್ಲಿದೆ. ಅಗತ್ಯ ಪರವಾನಗಿ ಇಲ್ಲದೆ ಪಾಕಿಸ್ತಾನದ ಪರಮಾಣು ಮತ್ತು ಕ್ಷಿಪಣಿ ಸಂಬಂಧಿತ ಘಟಕಗಳಿಗೆ ತನ್ನ ಸೇವೆ ಸಲ್ಲಿಸುತ್ತಿದೆ. ಅಲ್ಲದೆ ಇದರೊಡನೆ ಪಾಕ್, ದಿ ಅರೇಬಿಯಾ ಮತ್ತು ಯುಎಇನಲ್ಲಿರುವ ಟೆಕ್ಕೇರ್ ಸರ್ವಿಸಸ್ ಎಫ್ ಝಡ್ ಸಂಸ್ಥೆ ಪಾಕಿಸ್ತಾನದೊಡನೆ ಸುರಕ್ಷಿತ ಪರಮಾಣು ಕಾರ್ಯಕ್ರಮ ರೂಪಿಸಲು ಯುಎಸ್ ಮುಂದಾಗಿದ್ದಾಗ ಸುಳ್ಳು  ಮತ್ತು ಆಧಾರ ರಹಿತ ಮಾಹಿತಿ ನೀಡಿತ್ತು ಎಂದು ಅಮೆರಿಕಾ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com