ಹಖ್ಖಾನಿ ಉಗ್ರ ಸಂಘಟನೆ ಸಂಸ್ಥಾಪಕ ಜಲಾಲುದ್ದೀನ್ ಹಖ್ಖಾನಿ ಸಾವು: ವರದಿ

ಆಫ್ಘಾನಿಸ್ತಾನ ಕುಖ್ಯಾತ ಉಗ್ರ ಸಂಘಟನೆ ಹಖ್ಖಾನಿ ನೆಟ್ವರ್ಕ್ ಸಂಸ್ಥಾಪಕ ಜಲಾಲುದ್ದೀನ್ ಹಖ್ಖಾನಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಬುಲ್: ಆಫ್ಘಾನಿಸ್ತಾನ ಕುಖ್ಯಾತ ಉಗ್ರ ಸಂಘಟನೆ ಹಖ್ಖಾನಿ ನೆಟ್ವರ್ಕ್ ಸಂಸ್ಥಾಪಕ ಜಲಾಲುದ್ದೀನ್ ಹಖ್ಖಾನಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ ಈ ಬಗ್ಗೆ ಸ್ವತಃ ಹಖ್ಖಾನಿ ಉಗ್ರ ಸಂಘಟನೆಯೇ ಮಾಹಿತಿ ನೀಡಿದ್ದು, ಸಂಘಟನೆ ಸಂಸ್ಥಾಪಕ ಜಲಾಲುದ್ದೀನ್ ಹಖ್ಖಾನಿ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದೆ. ಹಖ್ಖಾನಿ ನೆಟ್ವರ್ಕ್ ಮೂಲಗಳು ತಿಳಿಸಿರುವಂತೆ ಜಲಾಲುದ್ದೀನ್ ಹಖ್ಖಾನಿ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಕಳೆದ ಹಲವು ವರ್ಷಗಳಿಂದ ಆತ ಅನಾರೋಗ್ಯಕ್ಕೆ ತುತ್ತಾಗಿದ್ದನಂತೆ. ಇದೀಗ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಿರುವ ಅಮೆರಿಕದ ತನಿಖಾ ಸಂಸ್ಥೆ ಸಿಐಎ ಜಲಾಲುದ್ದೀನ್ ಹಖ್ಖಾನಿ ಸಾವಿನ ಬಳಿಕ ಆತನ ಪುತ್ರ ಸಿರಾಜುದ್ದೀನ್ ಹಖ್ಖಾನಿ ಉಗ್ರ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದಾನೆ ಎಂದು ಹೇಳಿದೆ. ಅಂತೆಯೇ ತಾಲಿಬಾನ್ ಉಗ್ರ ಸಂಘಟನೆಗೂ ಈತನೇ ಉಪ ಮುಖ್ಯಸ್ಥನಾಗಿಯೂ ನೇಮಕವಾಗಿದ್ದಾನೆ. ಈ ಬಗ್ಗೆ ತಾಲಿಬಾನ್ ಉಗ್ರ ಸಂಘಟನೆ ಕೂಡ ಸಮರ್ಥನೆ ನೀಡಿದೆ ಎಂದು ಸಿಐಎ ತಿಳಿಸಿದೆ. 
ಮೃತ ಜಲಾಲುದ್ದೀನ್ ಹಖ್ಖಾನಿ ಅಲ್ ಖೈದಾ ಮುಖ್ಯಸ್ಥ ಬಿನ್ ಲಾಡೆನ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com