ವರ್ಕೌಟ್ ಆಯ್ತಾ ಸಿಧು ನಡೆ?: ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ ಪುರ ಗಡಿ ಕಾರಿಡಾರ್ ಮುಕ್ತಗೊಳಿಸಿದ ಪಾಕ್!

ಭಾರತೀಯರು ಸ್ವಾಗತಿಸುವ ನಿರ್ಧಾರವೊಂದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೈಗೊಂಡಿದ್ದು, ಪಾಕಿಸ್ತಾನದ ಸರ್ಕಾರ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ ಪುರ ಗಡಿ ಕಾರಿಡಾರ್ ನ್ನು ಮುಕ್ತಗೊಳಿಸಲು ನಿರ್ಧರಿಸಿದೆ.
ವರ್ಕೌಟ್ ಆಯ್ತಾ ಸಿಧು ನಡೆ?: ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ ಪುರ ಗಡಿ ಕಾರಿಡಾರ್ ನ್ನು ಮುಕ್ತಗೊಳಿಸಿದ ಪಾಕ್!

ಪಾಕಿಸ್ತಾನದ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರತಿಕ್ರಿಯೆ ನೀಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ  ಧನ್ಯವಾದ ತಿಳಿಸಿದ್ದು ಪಾಕ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಗುರುನಾನಕ್ ಅವರ 550 ನೆ ಜನ್ಮದಿನಾಚರಣೆಯ ಅಂಗವಾಗಿ ಪಾಕಿಸ್ತಾನ ಅಲ್ಲಿನ ಪಂಜನ ಪ್ರಾಂತ್ಯದಲ್ಲಿರುವ ಕರ್ತಾರ್ ಪುರ ಸಾಹಿಬ್ ನ್ನು ಸಿಖ್ ಸಮುದಾಯದವರಿಗಾಗಿ ತೆರೆದಿದೆ. 
ಸಿಖ್ ಸಮುದಾಯದ ಪ್ರಥಮ ಗುರು ಕರ್ತಾರ್ ಪುರದಲ್ಲೇ ಕೊನೆಯುಸಿರೆಳೆದಿದ್ದು, ಅವರ ಸ್ಮರಣಾರ್ಥ 2019 ರ ನವೆಂಬರ್ ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.  ಕರ್ತಾರ್ ಪುರಕ್ಕೆ ಸಿಖ್ ಸಮುದಾಯದ ಯಾತ್ರಾರ್ಥಿಗಳಿಗೆ ಮುಕ್ತ ಪ್ರವೇಶ ಕಲ್ಪಿಸುವುದಕ್ಕಿಂತಲೂ ಸಂತಸ ವಿಷಯ ಮತ್ತೊಂದಿಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. 
ಇಮ್ರಾನ್ ಖಾನ್ ರಾಜಕಾರಣವನ್ನು ಧರ್ಮದಿಂದ ಹೊರಗಿಟ್ಟಿದ್ದಾರೆ, ಇದಕ್ಕಾಗಿ ಧನ್ಯವಾದ ತಿಳಿಸುತ್ತೇನೆ, ಯಾತ್ರಾರ್ಥಿಗಳಿಗೆ ಕರ್ತಾರ್ ಪುರಕ್ಕೆ ಹೋಗಲು ಅನುವು ಮಾಡಿಕೊಟ್ಟಾಗ ನಾನು ಅಲ್ಲಿಗೆ ಹೋಗುವ ಮೊದಲ ವ್ಯಕ್ತಿಯಾಗಿರುತ್ತೇನೆ ಎಂದು ಸಿಧು ಹೇಳಿದ್ದಾರೆ. 
ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರಕ್ಕೆ ಪಾಕಿಸ್ತಾನಕ್ಕೆ ತೆರಳಿದ್ದ ನವಜೋತ್ ಸಿಂಗ್ ಸಿಧು, ಪಾಕ್ ಸೇನಾ ಮುಖ್ಯಸ್ಥರನ್ನು ಆಲಿಂಗನ ಮಾಡಿಕೊಂಡು ವಿವಾದಕ್ಕೆ ಗುರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com