ಅಮೆರಿಕಾ ಅಧ್ಯಕ್ಷ ಟ್ರಂಪ್ ಭದ್ರತಾ ಪಡೆಗೆ ಭಾರತೀಯ ಮೂಲದ ಮೊದಲ ಸಿಖ್ ಅನ್ಶ್ ದೀಪ್ ಸಿಂಗ್ ಭಾಟಿಯಾ ಸೇರ್ಪಡೆ

ಭಾರತೀಯ ಮೂಲದ ಅನ್ಶ್ ದೀಪ್ ಸಿಂಗ್ ಭಾಟಿಯಾ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾಸಗಿ ಭದ್ರತಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಹಾಗೂ ಅನ್ಶ್ ದೀಪ್ ಸಿಂಗ್ ಭಾಟಿಯಾ
ಡೊನಾಲ್ಡ್ ಟ್ರಂಪ್ ಹಾಗೂ ಅನ್ಶ್ ದೀಪ್ ಸಿಂಗ್ ಭಾಟಿಯಾ
ವಾಷಿಂಗ್ಟನ್: ಭಾರತೀಯ ಮೂಲದ ಅನ್ಶ್ ದೀಪ್ ಸಿಂಗ್ ಭಾಟಿಯಾ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಇಂತಹಾ ಮಹತ್ವದ ಹುದ್ದೆಗೆ ನೇಮಕವಾದ ಮೊದಲ ಸಿಖ್ಖ್ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.
ಪಂಜಾಬಿನ ಲೂಧಿಯಾನಾ ನಿವಾಸಿಯಾದ ಅನ್ಶ್ ದೀಪ್ ಸಿಂಗ್ ಸಾಕಷ್ಟು ಸಮಯದ ಕಠಿಣ ತರಬೇತಿಯ ಬಳಿಕ ಕಳೆದ ವಾರ ಅಮೆರಿಕಾ ಅಧ್ಯಕ್ಷರ ಭದ್ರತಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ಮೂಲದವರಾದ ಸಿಂಗ್ 1984 ರಲ್ಲಿ ಸಿಖ್ ವಿರೋಧಿ ದಂಗೆಯ ನಂತರ,ಪಂಜಾಬಿನ ಲೂಧಿಯಾನದಲ್ಲಿ ನೆಲೆಸಿದ್ದರು. ದಂಗೆಯಲ್ಲಿ ಅನ್ಶ್ ದೀಪ್ ಸಿಂಗ್ ತಮ್ಮ ಚಿಕ್ಕಪ್ಪನನ್ನು ಕಳೆದುಕೊಂಡಿದ್ದರೆ ತಂದೆಯ ಮೇಲೆ ಮೂರು ಬಾರಿ ಗುಂಡಿನ ದಾಳಿ ನಡೆದಿತ್ತು.
ಇನ್ನು ಅನ್ಶ್ ದೀಪ್ ಅವರಿಗಿ ಇನ್ನೂ ಹತ್ತು ವರ್ಷವಾಗಿದ್ದ ವೇಳೆ 2000 ರಲ್ಲಿ, ಅವರ ಕುಟುಂಬವು ಬಾರತದಿಂದ ದೂರದ ಅಮೆರಿಕಾಗೆ ತೆರಳಿತ್ತು.
ಭದ್ರತಾ ಕೆಲಸಕ್ಕೆ ನಿಯೋಜನೆಗೊಳ್ಳುವ ಮುನ್ನ ತಮ್ಮ ಗುರುತನ್ನು ಬದಲಿಸಿಕೊಳ್ಳಬೇಕೆಂದು ಮೊದಲಿಗೆ ಅವರಲ್ಲಿ ಕೇಳಲಾಗಿತ್ತು, ಆದರೆ ಸಿಖ್ಖ್ ಧರ್ಮೀಯರಾದ ಅವರು ಇದಕ್ಕೆ ಸಮ್ಮತಿಸಿರಲಿಲ್ಲ ಹಾಗೂ ಅದಕ್ಕಾಗಿ ಅವರು ಕಾನೂನು ಸಮರವನ್ನೂ ನಡೆಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ ಅಂಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com