ಇಮ್ರಾನ್ ಖಾನ್ ರನ್ನು ಮೊದಲೇ ತೊರೆಯದಿದ್ದ ಬಗ್ಗೆ ವಿಷಾದವಿದೆ; ರೆಹಮ್ ಖಾನ್

ಲಿಬಿಯಾ ಮೂಲದ ಬ್ರಿಟಿಷ್ ಪಾಕಿಸ್ತಾನ ಪತ್ರಕರ್ತೆ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ..
ರೆಹಮ್ ಖಾನ್
ರೆಹಮ್ ಖಾನ್

ಲಿಬಿಯಾ ಮೂಲದ ಬ್ರಿಟಿಷ್ ಪಾಕಿಸ್ತಾನ ಪತ್ರಕರ್ತೆ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ಇತ್ತೀಚೆಗೆ ಆತ್ಮಚರಿತ್ರೆ ಬರೆದು ಸುದ್ದಿಯಾಗಿದ್ದಾರೆ. ''ಸೆಕ್ಸ್, ಡ್ರಗ್ಸ್, ಬ್ಲಾಕ್ ಮ್ಯಾಜಿಕ್'' ಪುಸ್ತಕ ಬರೆದಿದ್ದು ಅದರಲ್ಲಿ ಇಮ್ರಾನ್ ಖಾನ್ ಜೊತೆಗಿನ ಸಂಬಂಧ, ಅಲ್ಪಾವಧಿಯ ಮದುವೆ, ವಿಚ್ಛೇದನ ಇತ್ಯಾದಿ ಬಗ್ಗೆ ಬರೆದಿದ್ದಾರೆ. ಈ ಬಗ್ಗೆ ಪತ್ರಕರ್ತೆ ಮೇಧಾ ದತ್ತ ಅವರಿಗೆ ಸಂದರ್ಶನ ನೀಡಿದ್ದಾರೆ.

ಈ ಪುಸ್ತಕ ಬರೆಯಲು ಪ್ರೇರಣೆಯೇನು?

-ಸಮಾಜದಲ್ಲಿ ಪ್ರತಿಯೊಬ್ಬರು ಸುಳ್ಳು ಹೇಳುತ್ತಾರೆ ಎಂದು ನನಗೆ ಅರಿವಾಯಿತು. ಯಾರೊಬ್ಬರೂ ನಮಗೆ ಸತ್ಯವನ್ನು ಮಾತ್ರ ಹೇಳುವುದಿಲ್ಲ. ನಾನು ಈ ಪುಸ್ತಕದಲ್ಲಿ ಪ್ರಾಮಾಣಿಕವಾಗಿಯೇ ಹೇಳಿದ್ದೇನೆ.

ಆರಂಭದ ಮದುವೆ 13 ವರ್ಷ ಬಾಳ್ವಿಕೆ ಬಂತು, ಮೊದಲ ಪತಿಯಿಂದ ಸಾಕಷ್ಟು ಕಿರುಕುಳ ಅನುಭವಿಸಿದ್ದೀರಿ ಎಂದಿದ್ದೀರಿ, ಇಮ್ರಾನ್ ಖಾನ್ ಜೊತೆಗೆ ಕೇವಲ 9 ತಿಂಗಳ ಜೀವನ?
-ಆರಂಭದಲ್ಲಿ ಚಿಕ್ಕ ವಯಸ್ಸಿನ ಯುವ ಹೆಣ್ಣು ಮಗಳನ್ನು ನಿಯಂತ್ರಿಸುವುದು ಸುಲಭ. ಮೊದಲ ಮದುವೆಯಾದ ಸಂದರ್ಭದಲ್ಲಿ ಯಾವುದೇ ಅನುಭವಗಳಿರಲಿಲ್ಲ. ಮೊದಲ ಮದುವೆಯಿಂದ ಮೂರು ಮಕ್ಕಳಾದವು. ಯಾರೂ ಸ್ನೇಹಿತರು, ಕುಟುಂಬದವರ ಬೆಂಬಲವಿರಲಿಲ್ಲ. ಇಮ್ರಾನ್ ಖಾನ್ ನನ್ನು ಮದುವೆಯಾದಾಗ ನನಗೆ 42 ವರ್ಷ ಆ ಸಮಯದಲ್ಲಿ ಮಹಿಳೆ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪುವುದಿಲ್ಲ, ಸಾಧ್ಯವಾಗುವುದಿಲ್ಲ.

ನಿಮ್ಮ ಹೋರಾಟದ ಬದುಕಿನಲ್ಲಿ ದುರ್ಬಲತೆ ಕಾಡಲಿಲ್ಲವೇ?

-ನಾನು ಒಂದು ಹಂತದಲ್ಲಿ ಒಂದು ವಿಷಯದಿಂದ ಹೊರಬರಬೇಕಾಗಿತ್ತು. ಇದೇ ಸಮಯದಲ್ಲಿ ನನ್ನ ಮಕ್ಕಳಿಗಾಗಿ ಜೀವನ ಮಾಡಬೇಕಾಗಿತ್ತು. ನಾನು ಉತ್ತಮ, ಪ್ರೀತಿಸುವ ಕುಟುಂಬದಿಂದ ಬಂದವಳು, ನನ್ನ ಹೋರಾಟದ ಕಷ್ಟದ ದಿನಗಳಲ್ಲಿ ಧೈರ್ಯ ತುಂಬಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆ ಇತ್ತು. ಹೊಸದಾಗಿ ಮದುವೆಯಾದ ಜೋಡಿಗೆ ನಾನು ಹೇಳುವುದಿಷ್ಟೆ, ಆರಂಭದಲ್ಲಿ ನಿಮ್ಮಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಮುಂದೆ ಅದು ಸರಿಯಾಗುವುದು ಕಡಿಮೆ.

ಇಮ್ರಾನ್ ಖಾನ್ ಮದುವೆ ನಂತರ ಬೇರೆಯದೇ ವಾಸ್ತವ ಕಂಡೆ ಎಂದು ಹೇಳಿದ್ದೀರಿ? ಹೇಗೆ?
-ಮದುವೆಯಾದ ನಂತರ ಮಹಿಳೆಯರು ಪತಿ ಪರಮೇಶ್ವರ ಸ್ಥಿತಿಗೆ ಹೋಗುತ್ತಾರೆ. ನಾವು ಅದನ್ನು ಅನೇಕ ವರ್ಷಗಳವರೆಗೆ ನಿರಾಕರಿಸುತ್ತಿರಬಹುದು. ಇಮ್ರಾನ್ ಖಾನ್ ಜೊತೆ ಜೀವನ ಮಾಡುವಾಗ ಕೆರಳಿಸುವಂತೆ ಆಗುತ್ತಿತ್ತು. ನಾನು ಅವರನ್ನು ಕ್ಷಮಿಸುತ್ತಾ ಬೇರೆಯವರ ಮೇಲೆ ಆರೋಪ ಮಾಡುತ್ತಾ ಹೋದೆ, ಆದರೆ ಅವರನ್ನು ಮೊದಲೇ ತೊರೆಯಲಿಲ್ಲವಲ್ಲಾ ಎಂದು ನನಗೆ ಪಶ್ಚಾತಾಪವಾಗುತ್ತಿದೆ. ಮಹಿಳೆಯರು ಕೆಟ್ಟ ಪುರುಷರಿಗೆ ಅವಕಾಶ ನೀಡುತ್ತಿರುತ್ತಾರೆ.

ನೀವು ಶಿಕ್ಷಿತ ಉತ್ತಮ ಹಿನ್ನಲೆಯ ಕುಟುಂಬಕ್ಕೆ ಸೇರಿದವರು, ಮದುವೆ ನಂತರ ಸಂಪೂರ್ಣ ಬದಲಾಯಿತು, ಇದನ್ನು ಬಹುತೇಕ ಮಹಿಳೆಯರು ಎದುರಿಸುತ್ತಾರಾ?

-ನಿಶ್ಚಿತಾರ್ಥವನ್ನು ಮುರಿದುಕೊಳ್ಳುವುದು ಕೂಡ ನಮ್ಮ ಕುಟುಂಬದಲ್ಲಿ ಒಪ್ಪಿಗೆಯ ವಿಷಯವಾಗಿರಲಿಲ್ಲ. ನನ್ನ ವಿಚ್ಛೇದನದಿಂದಾಗಿ ನನ್ನ ತಾಯಿ ಸಮಾಜದಲ್ಲಿ ಕಳಂಕ ಅವಮಾನ ಎದುರಿಸಬೇಕಾಗುತ್ತದೆ ಎಂದು ನಾನು ನನ್ನ ವಾಸ್ತವ ಕಷ್ಟಗಳನ್ನು ಮುಚ್ಚಿಡುತ್ತಾ ಬಂದಿದ್ದೆ. ಇದು ಉನ್ನತ ಮಟ್ಟದ ಕುಟುಂಬಗಳಲ್ಲಿ ಸಾಮಾನ್ಯ. ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಾಮಾಜಿಕ ಕಟ್ಟಳೆಗಳನ್ನು ನಾನು ಮುರಿದೆ. ನೀವು ಧ್ವನಿಯಿಲ್ಲದವರಿಗೆ ಧ್ವನಿಯಾದಿರಿ ಎಂದು ಅನೇಕ ಮಹಿಳೆಯರು ನನಗೆ ಹೇಳುತ್ತಾರೆ.

ನಿಮ್ಮ ಬಾಲ್ಯದಲ್ಲಿ ನಿಂದನೆ ಎದುರಿಸಿದ್ದೀರಿ ಎಂದಿದ್ದೀರಿ, ಅದು ಮುಂದೆ ದೊಡ್ಡವರಾದ ಮೇಲೆ ಯಾವ ರೀತಿ ಪರಿಣಾಮ ಬೀರಿತು?
-ಚಿಕ್ಕವಳಿದ್ದಾಗಿನ ಘಟನೆಗಳು ನನ್ನಲ್ಲಿ ವ್ಯಕ್ತಿತ್ವ ರೂಪಿಸಿತು. ಇಂದು ನಾನು ಮಕ್ಕಳನ್ನು ರಕ್ಷಿಸುವ ಪರವಾಗಿ ಮಾತನಾಡುತ್ತೇನೆ. ಮಕ್ಕಳು ಮತ್ತು ಪೋಷಕರು ಈ ಬಗ್ಗೆ ಅರಿವು ಹೊಂದಿರಬೇಕು.

ನೀವು ನ್ಯಾಯಯುತವಾಗಿ ಉಳಿಯುವ ಮತ್ತು ನಿರ್ಲಿಪ್ತ ಮನಸ್ಸಿಗೆ ಮತ್ತು ಶಕ್ತಿಯನ್ನು ಎದುರಿಸಿದ್ದೇನೆ ಎಂದು ಹೇಳಿದ್ದೀರಿ, ಹೇಗೆ?

ನಾನು ಬೇರೆಯವರ ಪ್ರಭಾವಕ್ಕೆ ಒಳಗಾಗುತ್ತಿರಲಿಲ್ಲ. ನಾನು ಯುವತಿಯಾಗಿದ್ದಾಗಲೆ ನನ್ನ ತತ್ವಗಳಲ್ಲಿ ಕಟ್ಟುನಿಟ್ಟಾಗಿದ್ದೆ. ಕಠಿಣ ಶ್ರಮ ಮತ್ತು ವೃತ್ತಿಪರತೆ ಮುಖ್ಯ ಎಂದು ಹೇಳುವ ಕುಟುಂಬದಿಂದ ಬಂದವಳಾದ ನಾನು ಇಮ್ರಾನ್ ಖಾನ್ ಅವರ ಮನೆ ಮತ್ತು ಅವರ ಪಕ್ಷ, ಅವರು ಮಾಡುತ್ತಿರುವ ಕೆಲಸಗಳು ಅಸಹ್ಯ ಹುಟ್ಟಿಸುತ್ತಿದ್ದವು. ಭ್ರಷ್ಟರಿಂದ ಹಣ ಪಡೆಯುವುದನ್ನು ನಾನು ಮುಕ್ತವಾಗಿ ಅವರ ಬಳಿ ಟೀಕಿಸುತ್ತಿದ್ದೆ.

ಇಮ್ರಾನ್ ಮತ್ತು ಜೆಮಿನಾ ಅವರ ವೈವಾಹಿಕ ಜೀವನ ಕೂಡ ಚೆನ್ನಾಗಿರಲಿಲ್ಲ ಎಂದಿದ್ದೀರಿ. ಆದರೆ ಅವರಿನ್ನೂ ಸ್ನೇಹಿತರಾಗುಳಿದಿದ್ದಾರೆ ಮತ್ತು ನೀವು ಅವರ ವಿಷಯದಲ್ಲಿ ಇಮ್ರಾನ್ ಖಾನ್ ಪರ ಇದ್ದೀರಿ?
-ಅವರದ್ದು ರಾಜಕೀಯ ಇಚ್ಚಾಶಕ್ತಿಯ ಹೊಂದಾಣಿಕೆ. ಅವರಿಬ್ಬರಿಗೂ ಇಮ್ರಾನ್ ಖಾನ್ ಪ್ರಧಾನಿಯಾಗುವ ಬಯಕೆಯಿತ್ತು. ಆದರೆ ಅವರಿಬ್ಬರ ನಡುವೆ ಪರಸ್ಪರ ಗೌರವವಿದೆ ಎಂದು ನನಗನಿಸುತ್ತಿಲ್ಲ. ನನ್ನ ಮಗ ಕೂಡ ಏನಾದರೂ ತಪ್ಪು ಮಾಡಿದರೆ ನಾನು ಸುಮ್ಮನೆ ಬಿಡುವುದಿಲ್ಲ. ಇಮ್ರಾನ್ ಖಾನ್ ಧನಾತ್ಮಕ ಬದಲಾವಣೆಗಳನ್ನು ದೇಶದಲ್ಲಿ ತರಲು ಬಯಸಿದ್ದಾರೆ ಎಂಬ ಅಲಂಕಾರಿಕ ಮಾತುಗಳನ್ನು ನಂಬಿ ನಾನು ಅವರನ್ನು ಮದುವೆಯಾದೆ. ಆದರೆ ಅವರು ಕೂಡ ಪಾಕಿಸ್ತಾನದ ಬೇರೆ ಭ್ರಷ್ಟ ರಾಜಕಾರಣಿಗಳಿಗಿಂತ ಭಿನ್ನವೇನಲ್ಲ. ನಾನು ಭ್ರಷ್ಟಾಚಾರವನ್ನು ಯಾವತ್ತಿಗೂ ಬೆಂಬಲಿಸುವುದಿಲ್ಲ.

ಪತ್ನಿಯಾಗಿ ನೀವು ಇಮ್ರಾನ್ ಖಾನ್ ರನ್ನು ಕಂಡಿದ್ದು ಮತ್ತು ನೋಡಿದ ವಿಷಯಗಳನ್ನು ಬಹಿರಂಗವಾಗಿ ಹೇಳುವುದು ಎಷ್ಟು ಸರಿ?
-ಇಮ್ರಾನ್ ಖಾನ್ ನನಗೆ ಮಾಜಿ ಪತಿ ಮಾತ್ರವಲ್ಲ ಅವರು ರಾಜಕಾರಣಿ ಮತ್ತು ಈಗ ದೇಶದ ಪ್ರಧಾನ ಮಂತ್ರಿ. ಹೊರಗೆ ಅವರು ಕಾಣುವುದಕ್ಕೂ ಮತ್ತು ಅವರು ಸಾರ್ವಜನಿಕರಲ್ಲಿ ಕಾಣಿಸಿಕೊಳ್ಳುವ ರೀತಿ ಮತ್ತು ವ್ಯಕ್ತಿತ್ವಕ್ಕೂ ಅವರು ಖಾಸಗಿಯಾಗಿ ಇರುವುದಕ್ಕೂ ಬಹಳ ವ್ಯತ್ಯಾಸವಿದೆ. ಅವರ ಬೂಟಾಟಿಕೆ ಮತ್ತು ಇಡೀ ರಾಜಕೀಯದ ಪ್ರಮುಖರ ಬಗ್ಗೆ ಹೇಳಿದ್ದೇನೆ. ನನಗಿಲ್ಲಿ ವ್ಯಕ್ತಿಗಿಂತ ದೇಶದ ಜನರ ಹಿತಾಸಕ್ತಿ ಮುಖ್ಯವಾಗುತ್ತದೆ.

ನೀವು ಸೆಲೆಬ್ರಿಟಿ ಪತ್ರಕರ್ತೆ. ಆದರೆ ಈಗ ನೀವು ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಎಂದು ಬಹಳ ಜನಪ್ರಿಯ. ಅದು ನಿಮಗೆ ಸಿಟ್ಟು ತರಿಸುತ್ತದೆಯೇ?

-ಜನರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ತಲೆಕೆಡಿಸಿಕೊಳ್ಳುವಷ್ಟು ಮೂರ್ಖಳಲ್ಲ ನಾನು. ಅದೆಲ್ಲ ತಾತ್ಕಾಲಿಕ. ಪುರುಷನಿಂದ ಗುರುತಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಅನೇಕ ಮಹಿಳೆಯರಿಗೆ ಇದುವೇ ಸಮಸ್ಯೆ. ಕಾಲ ಬದಲಾದಂತೆ ಮನುಷ್ಯರ ಸ್ವಭಾವಗಳು ಬದಲಾಗುತ್ತಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com