ಘೇಂಡಾಮೃಗ ಕಳ್ಳಬೇಟೆಗೆ ತೆರಳಿದ್ದವನನ್ನೇ ಬೇಟೆಯಾಡಿದ ಆನೆ, ದೇಹವನ್ನು ತಿಂದು ಹಾಕಿದ ಸಿಂಹಗಳು!

ಘೇಂಡಾಮೃಗವನ್ನು ಬೇಟೆಯಾಡುತ್ತಿದ್ದ ಕಳ್ಳಬೇಟೆಗಾರನನ್ನು ಆನೆ ಕೊಂದು ಹಾಕಿದ್ದು ಆತನ ದೇಹವನ್ನು ಸಿಂಹಗಳು ತಿಂದು ಹಾಕಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಘೇಂಡಾಮೃಗವನ್ನು ಬೇಟೆಯಾಡುತ್ತಿದ್ದ ಕಳ್ಳಬೇಟೆಗಾರನನ್ನು ಆನೆ ಕೊಂದು ಹಾಕಿದ್ದು ಆತನ ದೇಹವನ್ನು ಸಿಂಹಗಳು ತಿಂದು ಹಾಕಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಘೇಂಡಾಮೃಗಗಳನ್ನು ಬೇಟೆಯಾಡುತ್ತಿದ್ದ ಶಂಕಿತ ವ್ಯಕ್ತಿಯ ಮೃತದೇಹ ಕ್ರುಗರ್ ನ್ಯಾಷನಲ್ ಪಾರ್ಕ್ ನ ಮೊಸಳೆ ಬ್ರಿಡ್ಜ್ ಸೆಕ್ಷನ್ ಹತ್ತಿರ ಪತ್ತೆಯಾಗಿದ್ದು ಮೃತ ಬೇಟಗಾರನ ಗುರುತನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಆತನ ಜೊತೆ ಕಳ್ಳಬೇಟೆಗೆ ತೆರಳುತ್ತಿದ್ದವರು ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ನಿಮ್ಮನೆಯವನನ್ನು ಆನೆ ತುಳಿದು ಸಾಯಿಸಿದೆ ಎಂದು ವಿಷಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸ್ಕುಕುಜಾ ಪ್ರದೇಶದ ರೇಂಜರ್ ಗೆ ಈ ವಿಷಯ ತಿಳಿಸಿ ಆತನ ಪತ್ತೆ ಮಾಡುವಂತೆ ತಿಳಿಸಿದ್ದರು. ಅದರಂತೆ ಶೋಧ ಕಾರ್ಯಕ್ಕೆ ಮುಂದಾದಾದ ಮೃತ ವ್ಯಕ್ತಿಯ ದೇಹ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com