ಅನಿಲ್‌ ಅಂಬಾನಿ ಕಂಪನಿಯ ತೆರಿಗೆ ಮನ್ನಾ ಹಿಂದೆ ರಾಜಕೀಯ ಹಸ್ತಕ್ಷೇಪ ಇಲ್ಲ: ಫ್ರಾನ್ಸ್

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್‌ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಸಂಸ್ಥೆಗೆ ಫ್ರಾನ್ಸ್‌ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿರುವ ಬಗ್ಗೆ ಫ್ರಾನ್ಸ್ ಸ್ಪಷ್ಟನೆ ನೀಡಿದೆ.
ಅನಿಲ್‌ ಅಂಬಾನಿ ಕಂಪನಿಯ ತೆರಿಗೆ ಮನ್ನಾ ಹಿಂದೆ ರಾಜಕೀಯ ಹಸ್ತಕ್ಷೇಪ ಇಲ್ಲ: ಫ್ರಾನ್ಸ್
ಅನಿಲ್‌ ಅಂಬಾನಿ ಕಂಪನಿಯ ತೆರಿಗೆ ಮನ್ನಾ ಹಿಂದೆ ರಾಜಕೀಯ ಹಸ್ತಕ್ಷೇಪ ಇಲ್ಲ: ಫ್ರಾನ್ಸ್
Updated on: 
ಪ್ಯಾರಿಸ್: ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್‌ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಸಂಸ್ಥೆಗೆ ಫ್ರಾನ್ಸ್‌ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿರುವ ಬಗ್ಗೆ ಫ್ರಾನ್ಸ್ ಸ್ಪಷ್ಟನೆ ನೀಡಿದೆ. 
ತೆರಿಗೆ ಮನ್ನಾ ಮಾಡಿರುವುದರ ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆದಿಲ್ಲ, ಈ ಪ್ರಕ್ರಿಯೆ ಫ್ರಾನ್ಸ್ ನ ತೆರಿಗೆ ಅಧಿಕಾರಿಗಳು ಹಾಗೂ ರಿಲಾಯನ್ಸ್ ನ ಅಂಗಸಂಸ್ಥೆ ನಡುವೆ ನಡೆದಿರುವ ಒಪ್ಪಂದ ಎಂದು ಫ್ರಾನ್ಸ್ ದೂತವಾಸ ಕಚೇರಿ  ಪ್ರತಿಕ್ರಿಯೆ ನೀಡಿದೆ. 
ಭಾರತ ಸರ್ಕಾರ 36 ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡ ಕೆಲವೇ ತಿಂಗಳಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್‌ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಸಂಸ್ಥೆಗೆ ಫ್ರಾನ್ಸ್‌ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿತ್ತು. ಈ ಬೆಳವಣಿಗೆಯಲ್ಲಿ ರಾಜಕೀಯ ಹಸ್ತಕ್ಷೇಪ ಇದೆ ಎಂಬ ಮಾತು ಕೇಳಿಬಂದಿತ್ತು. ಫ್ರಾನ್ಸ್ ನ ತೆರಿಗೆ ಅಧಿಕಾರಿಗಳು ಹಾಗೂ ರಿಲಾಯನ್ಸ್ ಫ್ಲಾಗ್ 2008-12 ರಲ್ಲಿ ತೆರಿಗೆ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಒಪ್ಪಂದಕ್ಕೆ ಮುಂದಾಗಿದ್ದವು ಎಂದು ಫ್ರಾನ್ಸ್ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com