ಸಂಸತ್ತಿನಲ್ಲಿ ಮಂಗಳವಾರ ವಿಶೇಷ ಹೇಳಿಕೆ ನೀಡಿರುವ ಸಚಿವ ವಿಜೆವರ್ದನೆ, 'ದಾಳಿ ನೆಡೆಸಿರುವ ತೀವ್ರವಾದಿಗಳ ಗುಂಪು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಜೆಎಮ್ಐ ನೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯ ಮೂಲಕ ಬಹಿರಂಗವಾಗಿದ್ದು, ಈ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಅಂತೆಯೇ ಈ ಗುಂಪಿನ ಪೂರ್ಣ ಮಾಹಿತಿ ನೀಡಲು ನಿರಾಕರಿಸಿದ ಅವರು, 'ಇಂತಹ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಗಳ ಸದಸ್ಯರನ್ನು ನ್ಯಾಯದ ಕಕ್ಷೆಗೆ ಒಳಪಡುವುದನ್ನು ಖಾತರಿ ಪಡಿಸಲಾಗುವುದು. ದಾಳಿಗಳ ಹಿಂದಿರುವ ವ್ಯಕ್ತಿಗಳ ಆಸ್ತಿ-ಪಾಸ್ತಿ ಮುಟ್ಟುಗೋಲುಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.