'ನಾವು ಬರಿ ತರಗತಿ, ಮೊಬೈಲ್, ಲ್ಯಾಪ್ ಟಾಪ್ನಲ್ಲಿ ಸಮಯ ಕಳೆಯಬಾರದು. ಎಲ್ಲರೊಂದಿಗೂ ಬೆರೆಯಬೇಕು. ಪ್ರತಿಯೊಬ್ಬರಿಂದ ಕಲಿಯಬೇಕು. ಶ್ರೀಲಂಕಾ ಹಲವು ಧರ್ಮಗಳ ಸಮ್ಮಿಲನವಾಗಿದೆ. ಹಿಂದೂ, ಮುಸ್ಲಿಂ, ಬುರೆಸ್ಟ್, ಪ್ರೆಸ್ಟಿಯನ್, ಸ್ಟಾಮಿಯಲ್, ಎಲ್ಲವೂ ಇವೆ. ಇವುಗಳಿಂದ ನಾವು ಪ್ರತ್ಯೇಕಗೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ನಮಗೆ ಬೆಸೆದುಕೊಂಡಿವೆ. ಪ್ರತಿಯೊಬ್ಬರು, ಉತ್ಸಾಹ, ಕನಸು, ಮತ್ತು ಮಹತ್ವದ ಗುರಿಯೊಂದಿಗೆ ಮುನ್ನಡೆಯಬೇಕು, ಸಾಧಿಸಬೇಕು. ನಮ್ಮ ಹಸ್ತದಲ್ಲಿ ಐದು ಬೆರಳುಗಳಿವೆ. ಒಂದು ಬೆರಳಿನಲ್ಲಿ ಚಪ್ಪಾಳೆ ಹೊಡೆದಾಗ ಬರುವ ಸದ್ದಿಗೂ ಐದು ಬೆರಳು ಸೇರಿಸಿ ಹೊಡೆದಾಗ ಬರುವ ಸದ್ದಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗೆ ನಾವೆಲ್ಲವೂ ಜೊತೆಗೂಡಿ, ಒಟ್ಟಾಗಿ ಮುನ್ನಡೆಯಬೇಕು' ಎಂಬ ಸ್ಫೋರ್ತಿದಾಯಕ ಮಾತುಗಳನ್ನು ಅವರು ಹೇಳಿದ್ದರು.