ಶ್ರೀಲಂಕಾದಲ್ಲಿ ಮತ್ತೆ ಉಗ್ರ ದಾಳಿ: ರಕ್ಷಣೆ, ಪೊಲೀಸ್ ಮುಖ್ಯಸ್ಥರ ತಲೆದಂಡ

ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಸರಣಿ ಉಗ್ರ ದಾಳಿ ಅಲ್ಲಿನ ಸರ್ಕಾರ ಕಂಗೆಡಿಸಿದ್ದು, ಪರಿಣಾಮ ಶ್ರೀಲಂಕಾ ರಕ್ಷಣಾ ಮುಖ್ಯಸ್ಥರು ಹಾಗೂ ಪೊಲೀಸ್ ಮುಖ್ಯಸ್ಥರ ತಲೆದಂಡವಾಗಿದೆ.
ಉಗ್ರ ದಾಳಿ ನಡೆದ ಚರ್ಚ್ ಗೆ ಭೇಟಿ ನೀಡಿದ್ದ ಶ್ರೀಲಂಕಾ ಅಧ್ಯಕ್ಷ
ಉಗ್ರ ದಾಳಿ ನಡೆದ ಚರ್ಚ್ ಗೆ ಭೇಟಿ ನೀಡಿದ್ದ ಶ್ರೀಲಂಕಾ ಅಧ್ಯಕ್ಷ
ಕೊಲಂಬೋ: ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಸರಣಿ ಉಗ್ರ ದಾಳಿ ಅಲ್ಲಿನ ಸರ್ಕಾರ ಕಂಗೆಡಿಸಿದ್ದು, ಪರಿಣಾಮ ಶ್ರೀಲಂಕಾ ರಕ್ಷಣಾ ಮುಖ್ಯಸ್ಥರು ಹಾಗೂ ಪೊಲೀಸ್ ಮುಖ್ಯಸ್ಥರ ತಲೆದಂಡವಾಗಿದೆ.
ಈ ಬಗ್ಗೆ ಸ್ವತಃ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಸರಣಿ ಉಗ್ರ ದಾಳಿ ಸರ್ಕಾರದ ಕಂಗೆಡಿಸಿದೆ. ರಕ್ಷಣಾ ವಿಚಾರದಲ್ಲಿ ಗಭೀರ ಕರ್ತವ್ಯಲೋಪ ಆರೋಪದ ಮೇರೆಗೆ ಶ್ರೀಲಂಕಾ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಅವರ ರಾಜಿನಾಮೆ ಪಡೆಯಲಾಗಿದೆ. ಅಂತೆಯೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರೂ ಕೂಡ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಉಗ್ರ ದಾಳಿ ಕುರಿತು ಭಾರತ ನೀಡಿದ್ದ ಎಚ್ಚರಿಕೆಯನ್ನು ಅಧಿಕಾರಿಗಳು ಅಧ್ಯಕ್ಷರಿಗೆ ನೀಡಿರಲಿಲ್ಲ. ರಕ್ಷಣಾ ವಿಚಾರದಲ್ಲಿ ಆದ ಗಂಭೀರ ಲೋಪವಾಗಿದೆ ಎಂದು ಅಧ್ಯಕ್ಷ ಸಿರಿಸೇನಾ ಹೇಳಿದ್ದಾರೆ.
ಇನ್ನು 'ಕಳೆದ ಈಸ್ಟರ್ ಸಂಡೆ ದಿನದಂದು ನಡೆದಿದ್ದ ಭೀಕರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ದಾಳಿ ನಡೆಸಿದ್ದ 8 ಮಂದಿ ದಾಳಿಕೋರರ ಗುರುತು ಪತ್ತೆ ಮಾಡಲಾಗಿದ್ದು, ದಾಳಿಕೋರರ ಪೈಕಿ ಓರ್ವ ಮಹಿಳೆ ಕೂಡ ಸೇರಿದ್ದಾರೆ. ದಾಳಿಕೋರರೆಲ್ಲರೂ ಶ್ರೀಲಂಕಾ ನಿವಾಸಿಗಳು ಎಂದು ತಿಳಿದುಬಂದಿದ್ದು, ದಾಳಿಯಲ್ಲಿ ಇಸಿಸ್ ನೊಂದಿಗೆ ಎರಡು ಸ್ಥಳೀಯ ಉಗ್ರ ಸಂಘಟನೆಗಳಾದ ನ್ಯಾಷನಲ್ ಥೌವೀದ್ ಜಮಾತ್ ಮತ್ತು ಜಮಾಯತುಲ್ ಮಿಲಾಥು ಇಬ್ರಾಹಿಂ ಸಂಘಟನೆ ಕೂಡ ಕೈ ಜೋಡಿಸಿವೆ. ಈ  ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ ಎಂದು ಸಿರಿಸೇನಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com