ಶ್ರೀಲಂಕಾ ಸೇನೆಯ ಕಾರ್ಯಾಚರಣೆ; ತನ್ನ ಮೂವರು ಉಗ್ರರ ಸಾವು ಎಂದ ಇಸಿಸ್

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ವಿರುದ್ಧದ ಶ್ರೀಲಂಕಾ ಸೇನೆಯ ಕಾರ್ಯಾಚರಣೆ ಮುಂದುವರೆದಿದ್ದು, ಶುಕ್ರವಾರದ ಕಾರ್ಯಾಚರಣೆಯಲ್ಲಿ ತನ್ನ ಮೂವರು ಉಗ್ರರು ಹತರಾಗಿದ್ದಾರೆ ಎಂದು ಇಸಿಸ್ ಒಪ್ಪಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೊ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ವಿರುದ್ಧದ ಶ್ರೀಲಂಕಾ ಸೇನೆಯ ಕಾರ್ಯಾಚರಣೆ ಮುಂದುವರೆದಿದ್ದು, ಶುಕ್ರವಾರದ ಕಾರ್ಯಾಚರಣೆಯಲ್ಲಿ ತನ್ನ ಮೂವರು ಉಗ್ರರು ಹತರಾಗಿದ್ದಾರೆ ಎಂದು ಇಸಿಸ್ ಒಪ್ಪಿಕೊಂಡಿದೆ.
ಕಾಲ್ಮುನೈ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಶ್ರೀಲಂಕಾದ ಭದ್ರತಾಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿ ಮತ್ತು ಬಳಿಕ ನಡೆದ ಸ್ಫೋಟದಲ್ಲಿ 6 ಮಕ್ಕಳೂ ಸೇರಿ ಒಟ್ಟು 16 ಮಂದಿ ಸಾವಿಗೀಡಾಗಿದ್ದಾರೆ. ಈ ಸ್ಫೋಟ ನಡೆಸಿದ್ದು ತನ್ನಉಗ್ರರು ಎಂದು ಐಎಸ್ ಸಂಘಟನೆ ಒಪ್ಪಿಕೊಂಡಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖವಾಣಿ ಅಮಾಖ್ ಈ ಬಗ್ಗೆ ಸಂದೇಶ ರವಾನೆ ಮಾಡಿದ್ದು, ಕಾಲ್ ಮುನೈ ಬಾಂಬ್ ದಾಳಿಯಲ್ಲಿ ತನ್ನ ಮೂವರು ಕಮಾಂಡೋಗಳು ಹತರಾಗಿದ್ದಾರೆ. ಹತರಾದ ಉಗ್ರರನ್ನು ಅಬು ಹಮ್ಮದ್ ,ಅಬು ಸುಫ್ಯಾನ್ ಮತ್ತು ಅಬು ಅಲ್ ಖ್ವಾಕಾ ಎಂದು ಗುರುತಿಸಲಾಗಿದೆ.
ಕಳೆದ ಭಾನುವಾರ ಈಸ್ಟರ್ ದಿನದ ವಿಶೇಷ ಪ್ರಾರ್ಥನೆ ವೇಳೆ ಕೊಲಂಬೊದ ಚರ್ಚ್ ಮತ್ತು ಐಷಾರಾಮಿ ಹೋಟೆಲ್‌ನಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟಿಸಿದ್ದು , 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com