ಶ್ರೀಲಂಕಾದಲ್ಲಿ ರಾತ್ರಿ ಕರ್ಫ್ಯೂ ತೆರವುಗೊಳಿಸಿದ ಸರ್ಕಾರ

ಲಂಕಾ ರಾಜಧಾನಿ ಕೊಲಂಬೋದಲ್ಲಿ ಕಳೆದ ಈಸ್ಟರ್ ಸಂಡೇಯಂದು ನಡೆದಿದ್ದ ಭೀಕರ ಉಗ್ರ ದಾಳಿ ಬಳಿಕ ಹೇರಲಾಗಿದ್ದ ರಾತ್ರಿ ಕರ್ಫ್ಯೂವನ್ನು ಶ್ರೀಲಂಕಾ ಸರ್ಕಾರ ತೆರವುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೊಲಂಬೋ: ಲಂಕಾ ರಾಜಧಾನಿ ಕೊಲಂಬೋದಲ್ಲಿ ಕಳೆದ ಈಸ್ಟರ್ ಸಂಡೇಯಂದು ನಡೆದಿದ್ದ ಭೀಕರ ಉಗ್ರ ದಾಳಿ ಬಳಿಕ ಹೇರಲಾಗಿದ್ದ ರಾತ್ರಿ ಕರ್ಫ್ಯೂವನ್ನು ಶ್ರೀಲಂಕಾ ಸರ್ಕಾರ ತೆರವುಗೊಳಿಸಿದೆ.
ಹೌದು.. ಉಗ್ರ ದಾಳಿ ಬಳಿಕ ಶ್ರೀಲಂಕಾದಾದ್ಯಂತ ಹೇರಲಾಗಿದ್ದ ಕರ್ಫ್ಯೂವನ್ನು ಇದೀಗ ತೆರವುಗೊಳಿಸಲಾಗಿದೆ. ಆದರೆ ತೀರಾ ಸೂಕ್ಷ್ಮ ಪ್ರದೇಶಗಳಾದ ಕಾಲ್ ಮುನೈ, ಸಮಂತುರೈ ಮತ್ತು ಚವಲಕಡೆ ಪ್ರದೇಶಗಳಲ್ಲಿ ಹೊರತು ಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ. 
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಪೊಲೀಸ್ ಇಲಾಖೆ ವಕ್ತಾರ ರುವಾನ್ ಗುಣಶೇಖರ ಅವರು, ಕಾಲ್ ಮುನೈ, ಸಮಂತುರೈ ಮತ್ತು ಚವಲಕಡೆ ಪ್ರದೇಶದಲ್ಲಿಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಈ ಮೂರು ಪ್ರದೇಶಗಳನ್ನು ಹೊರತು ಪಡಿಸಿ ಉಳಿದಕಡೆಗಳಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಕಳೆದ ಈಸ್ಟರ್ ಸಂಡೇಯಂದು ರಾಜಧಾನಿ ಕೊಲಂಬೋದಲ್ಲಿ ಮೂರು ಚರ್ಚ್ ಗಳು ಹಾಗೂ ಮೂರು ಹೊಟೆಲ್ ಗಳ ಮೇಲೆ 9 ಮಂದಿ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರು. ಈ ವೇಳೆ ಸುಮಾರು 253 ಮಂದಿ ಸಾವನ್ನಪ್ಪಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com