
ಮನಿಲಾ: ಫಿಲಿಪೈನ್ಸ್ ನಲ್ಲಿ ಫ್ಯಾನ್‍ಫೋನ್ ಚಂಡಮಾರುತ ಅಪ್ಪಳಿಸಿದ್ದು, ಚಂಡಮಾರುತದ ಅಬ್ಬರಕ್ಕೆ ಕನಿಷ್ಛ 9 ಮಂದಿ ಬಲಿಯಾಗಿದ್ದಾರೆ.
ಫಿಲಿಪೈನ್ಸ್ ನಲ್ಲಿ ಫ್ಯಾನ್‍ಫೋನ್ ಚಂಡಮಾರುತದಿಂದಾಗಿ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಚಂಡಮಾರುತದ ಅಬ್ಬರಕ್ಕೆ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಇಲಾಯ್ಲೊ ಪ್ರಾಂತ್ಯದಲ್ಲಿ 6 ಮಂದಿ ಕ್ಯಾಪಿಜ್ ಮತ್ತು ಲೇಟ್ ಪ್ರಾಂತ್ಯದಲ್ಲಿ ಕ್ರಮವಾಗಿ ಇಬ್ಬರು ಹಾಗೂ ಒಬ್ಬರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಚಂಡಮಾರುತದ ಅಬ್ಬರ ಮಧ್ಯ ಫಿಲಿಪೈನ್ಸ್ ಮತ್ತು ಉತ್ತರ ಮಿಂಡಾನಾವೊ ಪ್ರದೇಶದ 38 ಹಳ್ಳಿಗಳಲ್ಲಿ ಸುಮಾರು 2,400 ಜನರ ಮೇಲೆ ಪರಿಣಾಮ ಬೀರಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ. ಅಂತೆಯೇ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.
Advertisement