ಸಾಲದ ಪ್ರಮಾಣಕ್ಕೂ ಹೆಚ್ಚು ಮೌಲ್ಯದ ಆಸ್ತಿ ವಶ: ನ್ಯಾಯ ಎಲ್ಲಿದೆ ಎಂದು ಕೇಳಿದ ಮಲ್ಯ!

ಮದ್ಯದ ದೊರೆ ವಿಜಯ್ ಮಲ್ಯ ಸಾವಿರಾರು ಕೋಟಿ ರು. ಸಾಲ ಮಾಡಿ ದೇಶ ಬಿಟ್ಟು ಹೋಗಿದ್ದು ಇದೀಗ ಟ್ವೀಟ್ ಮೂಲಕ "ನ್ಯಾಯ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ.
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್:  ಮದ್ಯದ ದೊರೆ ವಿಜಯ್ ಮಲ್ಯ ಸಾವಿರಾರು ಕೋಟಿ ರು. ಸಾಲ ಮಾಡಿ ದೇಶ ಬಿಟ್ಟು ಹೋಗಿದ್ದು ಇದೀಗ ಟ್ವೀಟ್ ಮೂಲಕ "ನ್ಯಾಯ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ. ತಮಗೆ ಸೇರಿದ್ದ  13,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.ಎಂದಿರುವ ಮಲ್ಯ ತಾನು ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ ಕೇವಲ 9,000 ಕೋಟಿ ರು. ಆಗಿರುವಾಗ ನನ್ನೆಲ್ಲಾ ಆಸ್ತಿಯನ್ನೂ ಜಪ್ತಿ ಮಾಡುವ ಉದ್ದೇಶವೆನು ಎಂದು ಪ್ರಶ್ನಿಸಿದ್ದಾರೆ.
ತಮ್ಮ ಸರಣಿ ಟ್ವೀಟ್ ನಲ್ಲಿ ಯುಕೆ ನ್ಯಾಯಾಲಯದ ಹಸ್ತಾಂತರ್ದ ತೀರ್ಪನ್ನು ಸಹ ವಿರೀಧಿಸಿರುವ ಮಲ್ಯ ನಾನು ಹಣ ನೀಡಬೇಕಾಗಿರುವ ಬ್ಯಾಂಕುಗಳು  ಇಂಗ್ಲೆಂಡ್ ನಲ್ಲಿ ತಮ್ಮ ವಕೀಲರಿಗೆ ನನ್ನ ವಿರುದ್ಧದ ಕ್ರಮಕ್ಕೆ ಮುಕ್ತ ಪರವಾನಗಿಯನ್ನು ನೀಡಿವೆ  ಎಂದು ಟೀಕಿಸಿದ್ದಾರೆ. ಈ ಮೂಲಕ ಸಾರ್ವಜನಿಕ ಹಣವನ್ನು ಕಾನೂನು ಪಾಲಕರ ಶುಲ್ಕಕ್ಕಾಗಿ  ಬಳಸಲಾಗುತ್ತಿದೆ.ಇದು "ಲಜ್ಜೆಗೆಟ್ಟ" ಖರ್ಚು ಎಮ್ದು ಹೇಳಿದ್ದಾರೆ.
"ನಾನು ಪ್ರತಿದಿನ ಮುಂಜಾನೆ ಏಳುವಾಗ ಬ್ಯಾಂಕುಗಳ ಸಾಲ ಹಿಂಪಡೆಯುವಿಕೆ ಟ್ರಿಬ್ಯೂನಲ್ (ಡಿಆರ್ ಟಿ) ನವರಿಂದ ನನ್ನ ಹೊಸದೊಂದ ಆಸ್ತಿ ವಶಕ್ಕೆ ಪಡೆಯಲಾಗಿದೆ ಎನ್ನುವ ಸುದ್ದಿಯನ್ನು ಕೇಳುತ್ತೇನೆ. ಇದಾಗಲೇ ಅವರು ವಶಕ್ಕೆ ಪಡೆದ ನನ್ನ ಆಸ್ತಿ ಮೌಲ್ಯ 13 ಸಾವಿರ ಕೋಟಿ ರೂ ದಾಟಿದೆ. ಆದರೆ ಬ್ಯಾಂಕುಗಳೇ ಹೇಳಿದಂತೆ ಸಾಲ, ಸಾಲದ ಮೇಲಿನ ಬಡ್ಡಿಯನ್ನೆಲ್ಲಾ ಸೇರಿ ನಾನು ಪಾವತಿಸಬೇಕಾದ ಮೊತ್ತ  9,000ಕೊಟಿ ರು. ಹಾಗಾದರೆ ಇನ್ನೆಷ್ಟು ದೂರ ಸಾಗಬೇಕು?ಯಾವ ರೀತಿ ಇದನ್ನು ಸಮರ್ಥಿಸಿಕೊಳ್ಲಬೇಕು?" ಬ್ಯಾಂಕ್ ಟ್ರಿಬ್ಯುನಲ್ ಅವರಿಗೆ ಮಲ್ಯ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಡಿಆರ್ ಟಿ ಅಧಿಕಾರಿಗಳು ಇತ್ತೀಚೆಗೆ ಬ್ಯಾಂಕಿನ ಒಕ್ಕೂಟದ ಪರವಾಗಿ ಭಾರತದಲ್ಲಿ 13,000 ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ."ಆದರೆ ಈ ವರದಿಯು ನಾನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನೀಡಬೇಕಾಗಿರುವುದು 9000 ಕೋಟಿ ರು.ಮಾತ್ರ. ಃಆಗಾದರೆ ನ್ಯಾಯವೆಲ್ಲಿದೆ?"ಅವರು ಕೇಳಿddAre.
ಭಾರತದಲ್ಲಿ ಎಲ್ಲಾ ಆಸ್ತಿಯನ್ನು ವಶಕ್ಕೆ ಪಡೆದ ಹೊರತಾಗಿಯೂ ಬ್ಯಾಂಕುಗಳು ಯುಕೆನಲ್ಲಿರುವ ವಕೀಲರಿಗೆ ನನ್ನ ವಿರುದ್ಧ ವಿಚಾರಣೆಗೆ ಸಂಪೂರ್ಣ ಪರವಾನಗಿ ನೀಡಿದ್ದಾರೆ.ಅವರು ನನಗೆ ವಿರುದ್ಧವಾಗಿ ಅನೇಕ ಅಪ್ರಾಮಾಣಿಕ ವಿಚಾರಣೆಗಳನ್ನು ನಡೆಸುತ್ತಿದ್ದಾರ ಎಂದು ಮಲ್ಯ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com