ಈ ಹಿಂದೆ, ಅಮೆರಿಕ, ರಷ್ಯಾ ದೇಶಗಳು ಚಂದ್ರನಲ್ಲಿಗೆ ತಮ್ಮ ನೌಕೆಗಳನ್ನು ಕಳುಹಿಸಿ ಅಲ್ಲಿನ ಮಣ್ಣು, ಕಲ್ಲು ಇತ್ಯಾದಿಗಳನ್ನು ಪರೀಕ್ಷೆಗಾಗಿ ಭೂಮಿಗೆ ತಂದಿದ್ದವು. ಆದರೆ, ನಾವು ಕಾಣದ ಚಂದ್ರನ ಮಗ್ಗುಲಿಗೆ ಉಪಗ್ರಹವನ್ನು ಕಳುಹಿಸಿರಲಿಲ್ಲ. ಇದೀಗ, ಆ ಕೆಲಸಕ್ಕೆ ಚೀನಾ ಕೈ ಹಾಕಿದೆ. ಈ ಯೋಜನೆ ಯಶಸ್ವಿಯಾದರೆ, ಚಂದ್ರನ ಅಧ್ಯಯನದಲ್ಲಿ ಅಮೆರಿಕ, ರಷ್ಯಾ ಮಾಡಿರುವ ಸಾಧನೆಗಳನ್ನು ಚೀನಾ ಹಿಂದಿಕ್ಕಿದಂತಾಗುತ್ತದೆ.