ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಿಕ್ ಸಂಪ್ರದಾಯ ಪ್ರಚಾರ: ವ್ಯಾಲೆಂಟೈನ್ಸ್ ಡೇಗೆ ಪ್ರತಿಯಾಗಿ ಪಾಕಿಸ್ತಾನ ವಿವಿಯಿಂದ ಸಿಸ್ಟರ್ಸ್ ಡೇ

ವಿಶ್ವಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಜ್ಜಾಗುತ್ತಿದ್ದರೆ ಇತ್ತ ಪಾಕಿಸ್ತಾನದ ವಿವಿಯೊಂದು ಇದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ (ಸಹೋದರಿಯರ ದಿನ) ಆಚರಣೆ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ.
ಲಾಹೋರ್: ವಿಶ್ವಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಜ್ಜಾಗುತ್ತಿದ್ದರೆ ಇತ್ತ ಪಾಕಿಸ್ತಾನದ ವಿವಿಯೊಂದು ಇದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ (ಸಹೋದರಿಯರ ದಿನ) ಆಚರಣೆ ಮಾಡುವುದಾಗಿ ಹೇಳಿ ಅಚ್ಚರಿ ಮೂಡಿಸಿದೆ.
ಹೇಳಿ ಕೇಳಿ ಪಾಕಿಸ್ತಾನ ಮೂಲಭೂತವಾದಿಗಳ ರಾಷ್ಟ್ರ. ಅಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆ ಅಷ್ಟಕ್ಕಷ್ಟೇ, ಆದರೂ ಅಲ್ಲಿನ ವಿಚಾರವಾದಿಗಳು ಹಾಗೂ ಕೆಲ ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಜ್ಜಾಗುತ್ತಿರುವಂತೆಯೇ ಇತ್ತ ಫೈಸಲಾಬಾದ್ ವಿವಿ ಅದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ ಆಚರಣೆಗೆ ಕರೆ ಕೊಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಫೈಸಲಾಬಾದ್ ವಿವಿಯ ಉಪ ಕುಲಪತಿ ಜಾಫರ್ ಇಕ್ಬಾಲ್ ರಾಂಧವ ಅವರು, ದೇಶದಲ್ಲಿ ಇಸ್ಲಾಮಿಕ್ ಸಂಪ್ರದಾಯದ ಪ್ರಚಾರಕ್ಕಾಗಿ ತಮ್ಮ ವಿವಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಆಚರಣೆಗೆ ಪ್ರತಿಯಾಗಿ ತಾವು ಸಿಸ್ಟರ್ಸ್ ಡೇ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತೆಯೇ ವ್ಯಾಲೆಂಟೈನ್ಸ್ ಡೇ ಇಸ್ಲಾಂ ಸಂಪ್ರದಾಯಕ್ಕೆ ದೊಡ್ಡ ಅತಂಕ ತಂದೊಡ್ಡಿದ್ದು, ಇದರಿಂದ ಇಸ್ಲಾಂ ಸಂಪ್ರದಾಯವಾದಿಗಳು ಹಾದಿ ತಪ್ಪುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ಈ ಪ್ರಯತ್ನ ಸಫಲಾಗುತ್ತದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಇಸ್ಲಾಂ ಸಂಪ್ರದಾಯ ರಕ್ಷಣೆಗೆ ತಾವು ಸದಾ ಸಿದ್ದ ಎಂದು ಹೇಳಿದ್ದಾರೆ. ಇಸ್ಲಾಂನಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವಿದ್ದು. ಅವರ ರಕ್ಷಣೆ ಮುಖ್ಯ. ಇದೇ ಕಾರಣಕ್ಕೆ ಅವರ ದೇಹವನ್ನು ಬುರ್ಖಾ ಮೂಲಕ ಸಂಪೂರ್ಣ ಮುಚ್ಚಲಾಗಿರುತ್ತದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com