ಪಾಕಿಸ್ತಾನ: 500 ವರ್ಷ ಹಳೆಯದಾದ ಸಿಯಾಲ್ ಕೋಟ್ ಗುರುದ್ವಾರಕ್ಕೆ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಅವಕಾಶ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ಕೋಟ್ ನಲ್ಲಿರುವ 500 ವರ್ಷ ಹಳೆಯದಾದ ಗುರುದ್ವಾರ ಭೇಟಿಗೆ ಇನ್ನೂ ಮುಂದೆ ಭಾರತೀಯ ಯಾತ್ರಾರ್ಥಿಗಳಿಗೂ ಅವಕಾಶವಿದೆ.
ಗುರುದ್ವಾರ
ಗುರುದ್ವಾರ
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ಕೋಟ್ ನಲ್ಲಿರುವ 500 ವರ್ಷ ಹಳೆಯದಾದ ಗುರುದ್ವಾರ ಭೇಟಿಗೆ  ಇನ್ನೂ ಮುಂದೆ ಭಾರತೀಯ ಯಾತ್ರಾರ್ಥಿಗಳಿಗೂ ಅವಕಾಶವಿದೆ.  
ಲಾಹೋರ್ ನಿಂದ 140 ಕಿಲೋ ಮೀಟರ್ ದೂರದಲ್ಲಿರುವ ಸಿಯಾಲ್ ಕೋಟಿನಲ್ಲಿರುವ ಬಾಬೆ - ಡೆ- ಬರ್ ಗುರುದ್ವಾರಕ್ಕೆ ಭಾರತೀಯರ ಭೇಟಿಗೆ ಈ ಹಿಂದೆ ಅವಕಾಶವಿರಲಿಲ್ಲ. 
ಪಂಜಾಬಿನಲ್ಲಿ ಅನೇಕ ಧಾರ್ಮಿಕ ಕೇಂದ್ರಗಳಿದ್ದು, ಭಾರತೀಯರು, ಯುರೋಪಿನ್ನರು, ಕೆನಡಾ ಹಾಗೂ ಅಮೆರಿಕಾ ದೇಶದವರು ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. 
ಭಾರತದಿಂದ ಬರುವ ಯಾತ್ರಾರ್ಥಿಗಳಿಗೂ ಸಿಯಾಲ್ ಕೋಟ್ ಗುರುದ್ವಾರ ಭೇಟಿಗೆ ಅವಕಾಶ ನೀಡುವಂತೆ ಪಂಜಾಬ್ ಗೌರ್ವನರ್ ಮೊಹಮ್ಮದ್ ಸರ್ವರ್  ನಿರ್ದೇಶನ ನೀಡದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 
ಸಿಖ್ ಧರ್ಮ ಸಂಸ್ಥಾಪಕ ಗುರುನಾನಾಕ್ ಅವರ ಜಯಂತಿ ಹಾಗೂ ವಾರ್ಷಿಕ ಪುಣ್ಯ ಸ್ಮರಣೆ  ಕಾರ್ಯಕ್ರಮಕ್ಕಾಗಿ ಪ್ರತಿವರ್ಷ ನೂರಾರು ಭಾರತೀಯ ಸಿಖ್ ಯಾತ್ರಿಕರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ.
ಸಿಖ್ ಸಂಪ್ರದಾಯದ ಪ್ರಕಾರ ಗುರುನಾನಕ್  16ನೇ ಶತಮಾನದಲ್ಲಿ ಕಾಶ್ಮೀರದಿಂದ ಬರುವಾಗ ಸಿಯಾಲ್ ಕೋಟ್ ನಲ್ಲಿ ಬೆರೆ ಮರದ ಕೆಳಗೆ ವಾಸ್ತವ್ಯಹೂಡಿದ್ದರಂತೆ. ಅವರ ಜ್ಞಾಪಕಾರ್ಥವಾಗಿ ಸರ್ದಾರ್ ನಾಥ್ ಸಿಂಗ್ ಆ ಪ್ರದೇಶದಲ್ಲಿ  ಗುರುದ್ವಾರ ನಿರ್ಮಿಸಿದ್ದರು ಎಂಬುದು ತಿಳಿದುಬಂದಿದೆ. 
ಕಳೆದ ವರ್ಷ ನವೆಂಬರ್ ನಲ್ಲಿ  ಗುರುನಾನಾಕ್  ಅಂತ್ಯವಾದ ಸ್ಥಳ ಪಾಕಿಸ್ತಾನದ ಕಾರ್ತಪುರ್ ದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರ ಹಾಗೂ  ಪಂಜಾಬಿನ ಗುರುದಾಸಪುರದಲ್ಲಿರುವ ಡೇರಾ ಬಾಬಾ ನಾನಕ್ ಗುರುದ್ವಾರದ ನಡುವೆ ಕಾರಿಡಾರ್ ನಿರ್ಮಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com