ವಾಯುಗಡಿ ನಿರ್ಬಂಧದಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟ!

ಪಾಕಿಸ್ತಾನ ತನ್ನ ಎಡವಟ್ಟಿಗೆ ಭಾರಿ ಬೆಲೆಯನ್ನೇ ತೆತ್ತಿದ್ದು, ವಾಯುಗಡಿ ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕೆ ಬರೊಬ್ಬರಿ 50 ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನ ತನ್ನ ಎಡವಟ್ಟಿಗೆ ಭಾರಿ ಬೆಲೆಯನ್ನೇ ತೆತ್ತಿದ್ದು, ವಾಯುಗಡಿ ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕೆ ಬರೊಬ್ಬರಿ 50 ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಾಲಾಕೋಟ್ ವಾಯುದಾಳಿ ಬಳಿಕ ತನ್ನ ವಾಯುಗಡಿ ನಿರ್ಬಂಧಿಸಿದ್ದ ಪಾಕಿಸ್ತಾನ ಬರೊಬ್ಬರಿ 5 ತಿಂಗಳ ಬಳಿಕ ವಾಯುಗಡಿಯ ನಿರ್ಬಂಧ ತೆರವುಗೊಳಿಸಿತ್ತು. ಆದರೆ ಪಾಕಿಸ್ತಾನದ ಎಡವಟ್ಟು ನಿರ್ಧಾರ ಭಾರಿ ಬೆಲೆಯನ್ನೇ ತೆರುವಂತೆ ಮಾಡಿದ್ದು, ವಾಯುಗಡಿ ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕೆ ಬರೊಬ್ಬರಿ 50 ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ. 
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಸರ್ಕಾರ ಹಣಕ್ಕಾಗಿ ವಿಶ್ವಹಣಕಾಸು ನಿಧಿ, ಯುಎಇ ಸೇರಿದಂತೆ ಅರಬ್ ರಾಷ್ಟ್ರಗಳ ಬಳಿ ಸಹಾಯ ಕೋರುತ್ತಿದೆ. ಇದರ ನಡುವೆಯೇ ಗಾಯದ ಮೇಲೆ ಎಂಬಂತೆ ತನ್ನದೇ ಎಡವಟ್ಟು ನಿರ್ಧಾರದಿಂದಾಗಿ ಪಾಕಿಸ್ತಾನ ಸರ್ಕಾರ ಇದೀಗ ಬರೊಬ್ಬರಿ 50 ಮಿಲಿಯನ್ ಡಾಲರ್ (ಸುಮಾರು 344 ಕೋಟಿ ರೂ. ) ನಷ್ಟ ಅನುಭವಿಸಿದೆ. ಕಳೆದ ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಾಕೋಟ್ ಉಗ್ರ ಕ್ಯಾಂಪ್ ಗಳ ಮೇಲೆ ವಾಯುದಾಳಿ ನಡೆಸಿತ್ತು.
ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೀಡಾಗಿದ್ದ ಪಾಕಿಸ್ತಾನ ತನ್ನ ವಾಯುಗಡಿ ನಿರ್ಬಂಧಿಸಿತ್ತು. ಪಾಕಿಸ್ತಾನದ ಈ ನಿರ್ಧಾರದಿಂದಾಗಿ ಯಾವುದೇ ರೀತಿಯ ವಿಮಾನ ಸಂಚಾರ ಇಲ್ಲದಂತಾಯಿತು. ಹಲವು ವಾಣಿಜ್ಯ ವಿಮಾನಗಳು ಬೇರೋಂದು ಮಾರ್ಗದಿಂದ ಸಂಚರಿಸಬೇಕಾದ ಅನಿವಾರ್ಯತೆ ಎದುರಾಯಿತು.  ಪಾಕ್ ಸರ್ಕಾರದ ಈ ಎಡವಟ್ಟು ನಿರ್ಧಾರದಿಂದಾಗಿ ಸುಮಾರು 344 ಕೋಟಿ ರೂ ನಷ್ಟ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com