ಲಂಕನ್ ಬಂದರು ಸಮೀಪ ಶಬಹಂಗ್ ಹಡಗು ಮುಳುಗಿರುವುದು
ವಿದೇಶ
ಅಜೆರ್ಬೈಜಾನ್ ಲಂಕನ್ ಬಂದರು ಸಮೀಪ ಮುಳುಗಿದ ಹಡಗು: ರಕ್ಷಿಸಲ್ಪಟ್ಟವರಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ
ಇಲ್ಲಿನ ಅಸ್ಟಾರಾ ಬಂದರು ಸಮೀಪ ಲಂಕರನ್ ಬಂದರು ಸಮೀಪ ಮುಳುಗಿ ಹೋಗುತ್ತಿದ್ದ ...
ಬಾಕು(ಅಜೆರ್ಬೈಜಾನ್): ಇಲ್ಲಿನ ಅಸ್ಟಾರಾ ಬಂದರು ಸಮೀಪ ಇರುವ ಲಂಕರನ್ ಬಂದರು ಹತ್ತಿರ ಹೋಗುತ್ತಿದ್ದ ಶಬಹಂಗ್ ಎಂಬ ಇರಾನ್ ಹಡಗಿನಲ್ಲಿದ್ದ ಇಬ್ಬರು ಭಾರತೀಯರನ್ನು ಇರಾನ್ ನ ಉಳಿದ 7 ಸಿಬ್ಬಂದಿಗಳ ಜೊತೆ ರಕ್ಷಿಸಲಾಗಿದೆ ಎಂದು ಇರಾನ್ ಬಂದರು ಮತ್ತು ಮೆರಿಟೈಮ್ ಸಂಘಟನೆಯ ಉಪ ಮುಖ್ಯಸ್ಥರು ತಿಳಿಸಿದ್ದಾರೆ.
ಅಜೆರ್ಬೈಜಾನ್ ಬಂದರು ಅಕಾಡೆಮಿಯಿಂದ ಸಿಬ್ಬಂದಿಯನ್ನು ರಕ್ಷಿಸಲು ಸಹಾಯ ಕೋರಿ ಎರಡು ಹೆಲಿಕಾಪ್ಟರ್ ಮತ್ತು ಗಸ್ತುಪಡೆ ಹಡಗಿನ ನೆರವಿನಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಇರಾನ್ ನ ಸುದ್ದಿ ಸಂಸ್ಥೆ ಇರ್ನಾ ವರದಿ ಮಾಡಿದೆ. ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಅಜೆರಿ ನೀರಿನಲ್ಲಿ ಹಡಗು ಮುಳುಗಿ ಹೋಗಿದೆ.
ಸಮುದ್ರದಲ್ಲಿನ ನೀರು ಸೋರುವಿಕೆಯಿಂದ ಹಡಗು ಮುಳುಗಿತು ಎಂದು ಇರಾನ್ ನ ಅಧಿಕಾರಿ ಜಲಿಲ್ ಎಸ್ಲಮಿ ತಿಳಿಸಿದ್ದಾರೆ.
ಟೈಲ್ಸ್ ನ್ನು ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಇರಾನ್ ನ ಅಂಜಲಿ ಬಂದರಿನಿಂದ ರಷ್ಯಾದ ಮಖಚ್ಕಲಾಕ್ಕೆ ಸಂಚಾರ ಬೆಳೆಸುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ