Mexico border
ವಿದೇಶ
ಮೆಕ್ಸಿಕೋ ಗಡಿ ಬಳಿ 7 ವರ್ಷದ ಭಾರತೀಯ ಬಾಲಕಿಯ ಮೃತದೇಹ ಪತ್ತೆ!
ಅರಿಜೋನಾ-ಮೆಕ್ಸಿಕೋ ಗಡಿಯಲ್ಲಿ ಏಳು ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಲ್ಯೂಕೆವಿಲ್ಲೆ ಪಶ್ಚಿಮದಿಂದ 17 ಮೈಲಿ ದೂರದಲ್ಲಿ ಗಡಿ ಗಸ್ತು ಏಜೆಂಟರು ಬುಧವಾರ ಬೆಳಗ್ಗೆ ಬಾಲಕಿಯ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಟಕ್ಸನ್ : ಅರಿಜೋನಾ-ಮೆಕ್ಸಿಕೋ ಗಡಿಯಲ್ಲಿ ಏಳು ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಲ್ಯೂಕೆವಿಲ್ಲೆ ಪಶ್ಚಿಮದಿಂದ 17 ಮೈಲಿ ದೂರದಲ್ಲಿ ಗಡಿ ಗಸ್ತು ಏಜೆಂಟರು ಬುಧವಾರ ಬೆಳಗ್ಗೆ ಬಾಲಕಿಯ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ನಾಲ್ವರೊಂದಿಗೆ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬಿಟ್ಟಿದ್ದಾರೆ. ಟಕ್ಸನ್ ವಲಯದ ಏಜೆಂಟರು ಭಾರತದಿಂದ ಬಂದಿದ್ದ ಇಬ್ಬರು ಮಹಿಳೆಯರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದು, ತದನಂತರ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಪ್ರತ್ಯೇಕಿಸಲಾಗಿತ್ತು ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಗಡಿಯ ದಕ್ಷಿಣ ಭಾಗದಲ್ಲಿ ಒಂದು ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಇತರ ವಲಸಿಗರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನಿಬ್ಬರು ಬುಧವಾರ ತಡರಾತ್ರಿ ಮೆಕ್ಸಿಕೋಗೆ ಮರಳಿರುವ ಬಗ್ಗೆ ಗಡಿ ಗಸ್ತು ಏಜೆಂಟರು ಅನುಮಾನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ