ಇದೇ ವೇಳೆ ಉಗ್ರವಾದವನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ, 'ಮನುಕುಲಕ್ಕೆ ಭಯೋತ್ಪಾದನೆ ಅತ್ಯಂತ ದೊಡ್ಡ ಬೆದರಿಕೆಯಾಗಿದೆ. ಇದು ಕೇವಲ ಅಮಾಯಕರ ಪ್ರಾಣವನ್ನು ಮಾತ್ರವಲ್ಲ, ಪರೋಕ್ಷವಾಗಿ ಆರ್ಥಿಕಾಭಿವೃದ್ಧಿ, ಕೋಮುಸಂಘರ್ಷದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ನಾವು ಎಲ್ಲ ಮಾದರಿಯ ಉಗ್ರವಾದವನ್ನು ಹತ್ತಿಕ್ಕಬೇಕು. ಉಗ್ರವಾದವನ್ನು ಮಾತ್ರವಲ್ಲ, ಅದಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಮೂಲಗಳಿಗೂ ಕತ್ತರಿ ಹಾಕಬೇಕು. ಉಗ್ರವಾದಕ್ಕೆ ಸಂಬಂಧಿಸಿದಂತೆ ನಾವು ನಿಷ್ಕ್ರಿಯರಾಗಿರಲು ಸಾಧ್ಯವೇ ಇಲ್ಲ. ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲ ಸಂಗತಿಗಳನ್ನೂ ನಾವು ವಿರೋಧಿಸಬೇಕು ಎಂದು ಹೇಳಿದರು.