ಹಮ್ಜಾ ಎಲ್ಲಿದ್ದಾನೆ ಎಂಬ ಬಗ್ಗೆ ಕೆಲ ವರ್ಷಗಳಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಕೆಲ ವರದಿಗಳು ಹೇಳಿದರೆ, ಇನ್ನೂ ಕೆಲ ವರದಿಗಳು ಅಫ್ಘಾನಿಸ್ತಾನ, ಸಿರಿಯಾದಲ್ಲಿದ್ದಾನೆ ಎನ್ನುತ್ತವೆ. ಆತ, ಇರಾನ್ ನಲ್ಲಿ ಗೃಹಬಂಧನದಲ್ಲಿದ್ದಾನೆ ಎನ್ನುವ ಮಾತುಗಳೂ ಇವೆ. ಹಾಗಾಗಿ, ಹಮ್ಜಾ ಇರುವಿಕೆ ಬಗ್ಗೆ ಸುಳಿವು ನೀಡುವಂತೆ ಅಮೆರಿಕ ಕೋರಿದೆ. 'ಹಮ್ಜಾ ಬಿನ್ ಲಾಡೆನ್ನ ಮಗ. ಆತ ಈಗ ಅಲ್ ಖೈದಾದ ನಾಯಕನಾಗಿ ಬೆಳೆಯುತ್ತಿದ್ದಾನೆ. ಆತ ಯಾವುದೇ ರಾಷ್ಟ್ರದಲ್ಲಿರಲಿ. ಆತನ ಬಗ್ಗೆ ಮಾಹಿತಿ ನೀಡಿದೆ ನಾವು ಬಹುಮಾನ ನೀಡುತ್ತೇವೆ,' ಎಂದು ಅಮೆರಿಕ ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.