ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ಸ್ಟ್ರೈಕ್, ಉಗ್ರ ಅಡಗುದಾಣ ಸೇರಿದಂತೆ ಹಲವು ಮನೆಗಳೂ ಧ್ವಂಸ!

ಪ್ಯಾಲೆಸ್ತೀನಿನ ಹಮಾಸ್ ಉಗ್ರರ ಪ್ರಮುಖ ಅಡಗುದಾಣಗಳಿರುವ ಗಾಜಾಪಟ್ಟಿ ಮೇಲೆ ಮತ್ತೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸಿದ್ದು, ಉಗ್ರರ ಹತ್ತಾರು ಅಡಗುದಾಣಗಳೊಂದಿಗೆ ಸಮೀಪದಲ್ಲಿದ್ದ ಹತ್ತಾರು ಮನೆಗಳೂ ಕೂಡ ದ್ವಂಸವಾಗಿವೆ ಎಂದು ತಿಳಿದುಬಂದಿದೆ.
ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ಸ್ಟ್ರೈಕ್
ಗಾಜಾಪಟ್ಟಿ ಮೇಲೆ ಇಸ್ರೇಲ್ ನಿಂದ ಮಿಸೈಲ್ ಸ್ಟ್ರೈಕ್
Updated on
ಟೆಲ್ ಅವೀವ್: ಪ್ಯಾಲೆಸ್ತೀನಿನ ಹಮಾಸ್ ಉಗ್ರರ ಪ್ರಮುಖ ಅಡಗುದಾಣಗಳಿರುವ ಗಾಜಾಪಟ್ಟಿ ಮೇಲೆ ಮತ್ತೆ ಇಸ್ರೇಲ್ ಭೀಕರ ಕ್ಷಿಪಣಿ ದಾಳಿ ನಡೆಸಿದ್ದು, ಉಗ್ರರ ಹತ್ತಾರು ಅಡಗುದಾಣಗಳೊಂದಿಗೆ ಸಮೀಪದಲ್ಲಿದ್ದ ಹತ್ತಾರು ಮನೆಗಳೂ ಕೂಡ ದ್ವಂಸವಾಗಿವೆ ಎಂದು ತಿಳಿದುಬಂದಿದೆ.
ಮಧ್ಯರಾತ್ರಿಯಲ್ಲಿ ಇಸ್ರೇಲಿ ಪಡೆಗಳು ಗಾಜಾಪಟ್ಟಿ ಮೇಲೆ ಕ್ಷಿಪಣಿಗಳ ಮಳೆಯನ್ನೇ ಸುರಿಸಿದ್ದು, ಈ ವೇಳೆ ಸ್ಛಳೀಯ ಕುಖ್ಯಾತ ಉಗ್ರಗಾಮಿ ಸಂಘಟನೆ ಹಮಾಸ್ ಹತ್ತಕ್ಕೂ ಅಡಗುದಾಣಗಳು ಧ್ವಂಸವಾಗಿವೆ. ಅಂತೆಯೇ ಅಡಗುದಾಣಗಳ ಸಮೀಪದಲ್ಲೇ ಇದ್ದ ಹಲವು ಮನೆಗಳು ಕೂಡ ಧ್ವಂಸವಾಗಿವೆ. ಪ್ರಮುಖವಾಗಿ ಹಮಾಸ್ ಉಗ್ರ ಸಂಘಟನೆಯ ಪ್ರಮುಖ ಮುಖಂಡನ ನಿವಾಸದ ಮೇಲೂ ಇಸ್ರೇಲ್ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು, ಇದಲ್ಲದೇ ಉಗ್ರ ಸಂಘಟನೆಯ ಸುಮಾರು 15ಕ್ಕೂ ಹೆಚ್ಚು ಉಗ್ರ ಅಡಗುದಾಣಗಳ ಮೇಲೆ ದಾಳಿ ಮಾಡಿದೆ.
ಈ ಬಗ್ಗೆ ಸ್ವತಃ ಹಮಾಸ್ ಉಗ್ರ ಸಂಘಟನೆ ವಕ್ತಾರ ಫಾವ್ಜಿ ಬರ್ಹೌಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಮಾಸ್ ಕೇಂದ್ರಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ಈ ಕುಕೃತ್ಯಕ್ಕೆ ಈಜಿಪ್ಟ್ ಕೂಡ ನೆರವು ನೀಡಿದ್ದು, ದಲ್ಲಾಳಿಯಾಗಿ ಕಾರ್ಯನಿರ್ವಹಿಸಿದೆ. ಆದರೆ ಇಸ್ರೇಲಿ ಪಡೆಗಳ ದಾಳಿಗೆ ನಾವೂ ಪ್ರತೀಕಾರ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕಳೆದವಾರವಷ್ಟೇ ಇದೇ ಹಮಾಸ್ ಉಗ್ರರು ಇರ್ಸೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಎರಡು ಬಾರಿ ಕ್ಷಿಪಣಿ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಯಾವುದೇ ಸಾವಾಗಿರಲಿಲ್ಲವಾದರೂ, ನಾಲ್ಕು ಇಸ್ರೇಲ್ ಪ್ರಜೆಗಳು ಗಾಯಗೊಂಡಿದ್ದರು. ಆ ಬಳಿಕ ಇಸ್ರೇಲ್ ಕೂಡ ಟೆಲ್ ಅವೀವ್ ನಿಂಗ ಗಾಜಾಪಟ್ಟಿ ಮೇಲೆ ಕ್ಷಿಪಣಿ ದಾಳಿ ಮಾಡಿ ತಿರುಗೇಟು ನೀಡಿತ್ತು. ಇದೀಗ ಮತ್ತೆ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ಮುಗಿಬಿದ್ದಿದೆ.
ಅತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಇಸ್ರೇಲ್ ಪಡೆಗಳು ದಾಳಿ ನಡೆಸಿರುವುದು ಸುದ್ದಿಗೆ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com