ಉಗ್ರ ನಿಗ್ರಹ ಕಾರ್ಯಾಚರಣೆ ಬೆನ್ನಲ್ಲೇ ಲಂಕಾದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ, ಕರ್ಫ್ಯೂ ಜಾರಿ

ಈಸ್ಟರ್ ಸಂಡೆ ಉಗ್ರ ದಾಳಿ ಬಳಿಕ ಶ್ರೀಲಂಕಾದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ಬೆನ್ನಲ್ಲೇ ಕೋಮು ಹಿಂಸಾಚಾರ ಭುಗಿಲೆದ್ದಿದ್ದು,...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಈಸ್ಟರ್ ಸಂಡೆ ಉಗ್ರ ದಾಳಿ ಬಳಿಕ ಶ್ರೀಲಂಕಾದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ಬೆನ್ನಲ್ಲೇ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಲಂಕಾದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ.
260 ಮಂದಿಯ ಧಾರುಣ ಸಾವಿಗೆ ಕಾರಣವಾದ ಈಸ್ಟರ್ ಸಂಡೇ ಉಗ್ರ ದಾಳಿ ಬೆನ್ನಲ್ಲೇ ಶ್ರೀಲಂಕಾ ಸೇನೆ ನಡೆಸಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಬೆನ್ನಲ್ಲೇ ಲಂಕಾದಲ್ಲಿ ಕೋಮು ಸಂಘರ್ಷ ಉಲ್ಭಣಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಲಂಕಾದಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದೆ. 
ಲಂಕಾದಲ್ಲಿ ಮುಸ್ಲಿಮ್ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದ್ದು, ಮುಸ್ಲಿಮರ ಒಡೆತನದ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಲಾಗುತ್ತಿದೆ. ಅಂತೆಯೇ ಲಂಕಾದ ಹಲವು ಪ್ರದೇಶಗಳಲ್ಲಿ ಕೋಮು ಸಂಘರ್ಷ ಉಲ್ಬಣಗೊಂಡಿದ್ದು, ಲಂಕಾದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಸೋಮವಾರದಿಂದಲೇ ಲಂಕಾದಲ್ಲಿ ಕೋಮುಗಲಭೆ ಆರಂಭವಾಗಿದ್ದು, ನಿನ್ನೆ ಲಂಕಾದ ಕುಲಿಯಪಿತಿಯಾ, ಬಿಂಗಿರಿಯಾ, ದುಮ್ಮಲ ಸುರಿಯಾ ಮತ್ತು ಹೆಟ್ಟಿಪೋಲಾ ಪಟ್ಟಣದಲ್ಲಿ ಕರ್ಫ್ಯೂ ಸಡಿಸಲಾಗಿತ್ತಾದರೂ, ಮತ್ತೆ ಗಲಭೆ ಆರಂಭವಾದ್ದರಿಂದ ಮತ್ತೆ ಕರ್ಫ್ಯೂ ಹೇರಲಾಗಿದೆ.
ಪ್ರಚೋದನಾಕಾರಿ ಪೋಸ್ಟ್​ನಿಂದ ಶ್ರೀಲಂಕಾ ಪ್ರಕ್ಷುಬ್ದ
ಚರ್ಚ್ ಮೇಲಿನ ಆತ್ಮಹತ್ಯಾ ದಾಳಿ ನಡೆದ ನಂತರ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಪರ ಹಾಗೂ ವಿರೋಧಿ ಪೋಸ್ಟ್​ ಗಳು ಹರಿದಾಡುತ್ತಿದ್ದು, ಮುಸ್ಲಿಮರ ಮೇಲೆ ದಾಳಿಗಳು ನಡೆಯುತ್ತಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಲಂಕಾ ಸರ್ಕಾರ ಸೋಮವಾರದಿಂದ ಫೇಸ್ ಬುಕ್ ಹಾಗೂ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.
ಈಸ್ಟರ್ ಸಂಡೇ ದಾಳಿ ಬಳಿಕ ಮುಸ್ಲಿಮರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ವಿರೋಧಿ ಪೋಸ್ಟ್ ಗಳ ಅಭಿಯಾನವನ್ನು ವಿರೋಧಿಸಿ, ಶ್ರೀಲಂಕಾದ ಈಶಾನ್ಯ ಭಾಗದಲ್ಲಿರುವ ಚಿಲಾವ್ ಎಂಬ ಪ್ರದೇಶದ ನಿವಾಸಿ ಮುಸ್ಲಿಂ ವ್ಯಕ್ತಿಯೊಬ್ಬ ಇದನ್ನು ಖಂಡಿಸಿ ಪೋಸ್ಟ್ ಹಾಕಿದ್ದನು. ಆತನ ಪೋಸ್ಟ್​ಗೆ ಕೆರಳಿದ ಕ್ರಿಶ್ಚಿಯನ್​ ಸಮುದಾಯದ ಕೆಲ ಯುವಕರ ಗುಂಪು ಚಿಲಾವ್ ನಲ್ಲಿರುವ ಆತನ ಅಂಗಡಿಗೆ ನುಗ್ಗಿ ಇಡೀ ಅಂಗಡಿಯನ್ನು ದ್ವಂಸ ಮಾಡಿದ್ದಾರೆ.  ಅಂಗಡಿ ಮಾಲೀಕನನ್ನೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಲ್ಲದೆ ಅಂಗಡಿ ಪಕ್ಕದಲ್ಲೇ ಇದ್ದ ಮಸೀದಿಯನ್ನೂ ದ್ವಂಸ ಮಾಡಿದ್ದಾರೆ. ಗಲಭೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ಧಾರೆ. ಅಲ್ಲದೆ ಸ್ಥಳದಲ್ಲಿ ಕರ್ಫ್ಯೂ ವಿಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com