ಸೌದಿ ತೈಲ ಘಟಕದ ದಾಳಿ ಹಿಂದೆ ಇರಾನ್ ಕೈವಾಡವಿದೆ; ಅಮೆರಿಕ
ವಿದೇಶ
ಸೌದಿ ತೈಲ ಘಟಕದ ದಾಳಿ ಹಿಂದೆ ಇರಾನ್ ಕೈವಾಡವಿದೆ; ಅಮೆರಿಕ
ಸೌದಿ ಅರೆಬಿಯಾದ ತೈಲ ಘಟಕಗಳ ಮೇಲೆ ನಡೆದಿರುವ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ.
ವಾಷಿಂಗ್ ಟನ್: ಸೌದಿ ಅರೆಬಿಯಾದ ತೈಲ ಘಟಕಗಳ ಮೇಲೆ ನಡೆದಿರುವ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ. ಉಪಗ್ರಹದ ಚಿತ್ರಗಳು ಹಾಗೂ ಬೇಹುಗಾರಿಕಾ ಇಲಾಖೆಯ ವರದಿಯನ್ನು ಆಧರಿಸಿ ಅಮೆರಿಕ ಈ ಆರೋಪ ಮಾಡಿದೆ.
ಆದರೆ, ಇರಾನ್ ಈ ದಾಳಿಯ ಆರೋಪವನ್ನು ನಿರಾಕರಿಸಿದೆ. ಆದರೆ, ಅಮೆರಿಕದ ಅಧಿಕಾರಿಯೋರ್ವರು ಅಂತಾರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡಿದ್ದು, ದಾಳಿಯ ದಿಕ್ಕು ಹಾಗೂ ವಿಸ್ತಾರವನ್ನು ಗಮನಿಸಿದರೆ ಅದು ಇರಾನ್ ಮೂಲದ ಹೌತಿ ಬಂಡಾಯಗಾರರತ್ತ ಬೊಟ್ಟು ಮಾಡಿ ತೋರಿಸುತ್ತದೆ ಎಂಬ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ