ಮೋದಿ-ಇಮ್ರಾನ್ ಖಾನ್
ಮೋದಿ-ಇಮ್ರಾನ್ ಖಾನ್

'ಹೌಡಿ ಮೋದಿ ಫ್ಲಾಪ್ ಶೋ' ಒಳಒಳಗೆ ಉರಿದುಕೊಳ್ಳುತ್ತಿರುವ ಪಾಕ್ ಸಚಿವನಿಂದ ಕಿಡಿ, ಫವಾದ್ ಕಾಲೆಳೆದ ನೆಟಿಗರು!

ಅಮೆರಿಕದ ಹ್ಯೂಸ್ಟನ್ ನಗರದ ಎನ್ ಆರ್ ಜಿ ಕ್ರೀಡಾಂಗಣದ ತುಂಬೆಲ್ಲಾ ಮೋದಿ ಮೋದಿ ಎಂಬ ಹರ್ಷೋದ್ಗಾರ. ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದ ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಆದರೆ ಪಾಕಿಸ್ತಾನ ಮಾತ್ರ ಒಳ ಒಳಗೆ ಉರಿದುಕೊಳ್ಳುತ್ತಾ ಈ ಕಾರ್ಯಕ್ರಮ ಫ್ಲಾಪ್ ಶೋ ಎಂದು ಹೇಳಿದೆ.
Published on

ಇಸ್ಲಾಮಾಬಾದ್: ಅಮೆರಿಕದ ಹ್ಯೂಸ್ಟನ್ ನಗರದ ಎನ್ ಆರ್ ಜಿ ಕ್ರೀಡಾಂಗಣದ ತುಂಬೆಲ್ಲಾ ಮೋದಿ ಮೋದಿ ಎಂಬ ಹರ್ಷೋದ್ಗಾರ. ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದ ಹೌಡಿ ಮೋದಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಆದರೆ ಪಾಕಿಸ್ತಾನ ಮಾತ್ರ ಒಳ ಒಳಗೆ ಉರಿದುಕೊಳ್ಳುತ್ತಾ ಈ ಕಾರ್ಯಕ್ರಮ ಫ್ಲಾಪ್ ಶೋ ಎಂದು ಹೇಳಿದೆ. 

ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತು ಹೌಡಿ ಮೋದಿ ಯಶಸ್ವಿ ಕಾರ್ಯಕ್ರಮವನ್ನು ಕಂಡು ಹೊಟ್ಟೆ ಉರಿದುಕೊಂಡಿರುವ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಮಾತ್ರ ಇದೊಂದು ಫ್ಲಾಪ್ ಶೋ ಎಂದು ಟ್ವೀಟ್ ಮಾಡಿದ್ದಾರೆ.

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪ್ರದರ್ಶನ ನಿರಾಶದಾಯವಾಗಿದೆ. ಬಿಲಿಯನ್ ಗಳಷ್ಟು ಹಣ ಖರ್ಚು ಮಾಡಿ ಅಮೆರಿಕಾ, ಕೆನಡಾ ಮತ್ತು ಇತರೆ ಹಲವು ದೇಶಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಒಗ್ಗೂಡಿಸಲಾಗಿದೆ ಅಷ್ಟೇ. ಹಣದಿಂದ ಎಲ್ಲವನ್ನು ಖರೀದಿಸಲು ಆಗುವುದಿಲ್ಲ ಎನ್ನುವುದನ್ನು ಇದು ನಿರೂಪಿಸಿದೆ ಎಂದು ಬರೆದುಕೊಂಡಿದ್ದಾರೆ.

ಫವಾದ್ ವಿರುದ್ಧ ಭಾರತೀಯರು ಮುಗಿಬಿದ್ದಿದ್ದಾರೆ. ವಿವಿಧ ಫೋಟೋಗಳನ್ನು ಶೇರ್ ಮಾಡಿ ಫವಾದ್ ಕಾಲೆಳೆಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com