ಭಾರತವು ಜನರನ್ನು ಆಕ್ರಮಣಶೀಲರನ್ನಾಗಿಸುತ್ತಿದೆ: ಇಮ್ರಾನ್ ಖಾನ್:

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಲ್ಲಿಯೂ ಕಾಶ್ಮೀರ ವಿವಾದವನ್ನು ಕೆದಕಿದ್ದಾರೆ. ಅಲ್ಲದೆ ಮುಸ್ಲಿಮರನ್ನು ತೀವ್ರಗಾಮಿಗಳನ್ನಾಗಿ ಮ್ಮಾಡುತ್ತಿರುವುದಾಗಿ ಭಾರತವನ್ನು ಆಕ್ಷೇಪಿಸಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್
Updated on


ಇಸ್ಲಾಮೋಫೋಬಿಯಾ ಜಗತ್ತಿನಲ್ಲಿ ವಿಭಜನೆಯನ್ನು ಸೃಷ್ಟಿಸುತ್ತದೆ

ನ್ಯೂಯಾರ್ಕ್:  ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಲ್ಲಿಯೂ ಕಾಶ್ಮೀರ ವಿವಾದವನ್ನು ಕೆದಕಿದ್ದಾರೆ. ಅಲ್ಲದೆ ಮುಸ್ಲಿಮರನ್ನು ತೀವ್ರಗಾಮಿಗಳನ್ನಾಗಿ ಮ್ಮಾಡುತ್ತಿರುವುದಾಗಿ ಭಾರತವನ್ನು ಆಕ್ಷೇಪಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರ ಭಾಷಣದ ಪ್ರಮುಖಾಂಶ ಹೀಗಿದೆ-

"ನಾವು ಅಧಿಕಾರಕ್ಕೆ ಬಂದಾಗ, ನಾವು ಶಾಂತಿಯನ್ನು ತರಲು ಪ್ರಯತ್ನಿಸುತ್ತೇವೆ ಎಂದು ಪ್ರಮಾಣ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಗುಂಪುಗಳಿಲ್ಲ, ಭಾರತದ ಆರೋಪ ಸುಳ್ಲಾಗಿದೆ.

"ಪುಲ್ವಾಮಾ ದಾಳಿ ನಡೆದಾಗ ಭಾರತ ತಕ್ಷಣ ನಮ್ಮನ್ನು ದೂಷಿಸಿತು. ನಾವು ಅವರನ್ನು ಪುರಾವೆ ಕೇಳಿದೆವು ಆದರೆ ಅವರು ತಮ್ಮ ವಿಮಾನವನ್ನು ಕಳುಹಿಸಿದ್ದಾರೆ

"ಪಿಎಂ ಮೋದಿಯವರ ಚುನಾವಣಾ ಪ್ರಚಾರ ಸಹ ಸುಳ್ಳುಗಳಿಂದಲೇ ಕೂಡಿತ್ತು.2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು "ನಾನು ಪಾಕಿಸ್ತಾನಕ್ಕೆ ಪಾಠ ಕಲಿಸಿದ್ದೇನೆ" ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ.

"ಪಿಎಂ ಮೋದಿಯವರ ಆರ್.ಎಸ್.ಎಸ್ಅಡಾಲ್ಫ್ ಹಿಟ್ಲರ್, ಬೆನಿಟೊ ಮುಸೊಲಿನಿಯಿಂದ ಸ್ಫೂರ್ತಿ ಪಡೆದಿದೆ. ಮುಸ್ಲಿಮರ ಜನಾಂಗೀಯ ಶುದ್ಧೀಕರಣವನ್ನು ಆರ್‌ಎಸ್‌ಎಸ್ ನಂಬುತ್ತದೆ. ಆರ್‌ಎಸ್‌ಎಸ್ ಗೂಂಡಾಗಳು ನೂರಾರು ಮುಸ್ಲಿಮರನ್ನು ಬಗ್ಗು ಬಡಿಯುತ್ತಿದೆ. ಮತ್ತೊಂದು ಪುಲ್ವಾಮಾ ಸಂಭವಿಸಿದಲ್ಲಿ ಭಾರತ ಬಂದು ಮತ್ತೆ ನಮ್ಮ ಮೇಲೆ ಬಾಂಬ್ ಹಾಕಬಹುದು. ಭಾರತದಲ್ಲಿ ವಾಸಿಸುವ ಮುಸ್ಲಿಮರು ಏನು ಯೋಚಿಸುತ್ತಾರೆ? ಅವರುಯೋಚಿಸುವುದಿಲ್ಲ.

"ಇನ್ನೂ ಏನಾದರೂ ಸಂಭವಿಸುವ ಮೊದಲು  ವಿಶ್ವಸಂಸ್ಥೆಯು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ 1945 ರಲ್ಲಿ ಯುಎನ್ ರಚನೆಯಾಯಿತು  ಕಾಶ್ಮೀರದಲ್ಲಿ ಕರ್ಫ್ಯೂ ತೆಗೆದುಹಾಕಿದಾಗ ರಕ್ತದೋಕುಳಿ ನಡೆಯುತ್ತದೆ" ಎಂದಿದ್ದಾರೆ.

ಇಸ್ಲಾಮೋಫೋಬಿಯಾ ಜಗತ್ತಿನಲ್ಲಿ ವಿಭಜನೆಯನ್ನು ಸೃಷ್ಟಿಸುತ್ತದೆ

ಇಸ್ಲಾಮೋಫೋಬಿಯಾ ಎಂಬುದು  ಅಪಾಯಕಾರಿ ವೇಗದಲ್ಲಿ ಬೆಳೆದಿದೆ ಎಂದು ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನ ಪ್ರಧಾನಿ ಖಾನ್ ನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಈ ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವುದು ನನ್ನ ಪಾಲಿನ ಗೌರವ ಎಂದಿರುವ ಖಾನ್ ಕೆಲವು "ತುರ್ತು ಸಮಸ್ಯೆಗಳನ್ನು" ಪರಿಹರಿಸಬೇಕಾಗಿದ್ದ ಕಾರಣ ನಾಉ ಇಲ್ಲಿಗೆ ಆಗಮಿಸಿದ್ದೇನೆ ಎಂದಿದ್ದಾರೆ.

"ಇಸ್ಲಾಮೋಫೋಬಿಯಾ ವಿಭಜನೆಗಳನ್ನು ಸೃಷ್ಟಿಸುತ್ತಿದೆ, ಹಿಜಾಬ್ ಆಯುಧವಾಗುತ್ತಿದೆ; ಮಹಿಳೆ ಬಟ್ಟೆಗಳನ್ನು ತೆಗೆಯಬಹುದು ಆದರೆ ಅವಳು ಹೆಚ್ಚು ಬಟ್ಟೆಗಳನ್ನು ಹಾಕಲು ಸಾಧ್ಯವಾಗುತ್ತಿಲ್ಲ

""ಇದು 9/11 ರ ನಂತರ ಪ್ರಾರಂಭವಾಯಿತು. ಮತ್ತು ಕೆಲ ಪಾಶ್ಚಿಮಾತ್ಯ ನಾಯಕರು ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಸಮೀಕರಿಸಿದ ಕಾರಣ ಇದು ಹುಟ್ಟಿತು" ಖಾನ್ ಹೇಳೀದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com