ಸೌದಿ: ಬಿಗಿಯಾದ ಬಟ್ಟೆ ಧರಿಸಿದರೆ, ಸಾರ್ವಜನಿಕವಾಗಿ ಕಿಸ್ ಮಾಡಿದರೆ ದಂಡ!
ರಿಯಾದ್: ಸಂಪ್ರದಾಯವಾದಿ ಸೌದಿ ಅರೇಬಿಯಾದಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದಿದ್ದು, ಸೌದಿಯಲ್ಲಿನ ಪುರುಷರು, ಮಹಿಳೆಯರು, ಪ್ರವಾಸಿಗರು ಬಿಗಿಯಾದ ಉಡುಪು ಧರಿಸಿದರೆ ಮತ್ತು ಸಾರ್ವಜನಿಕವಾಗಿ ಮುತ್ತುಕೊಟ್ಟರೆ ದುಬಾರಿ ದಂಡ ವಿಧಿಸಲಾಗುತ್ತದೆ.
ಹೌದು.. ಈ ಬಗ್ಗೆ ಸೌದಿ ಸರ್ಕಾರ ಶುಕ್ರವಾರ ಹೊಸ ಕಾನೂನು ಜಾರಿಗೆ ತಂದಿದ್ದು, ಸಾರ್ವಜನಿಕ ಸಭ್ಯತಾ ನಿಯಮದಡಿಯಲ್ಲಿ ಅಸಭ್ಯ, ಬಿಗಿಯಾದ ಉಡುಪು ಧರಿಸಿದರೆ ದುಬಾರಿ ದಂಡ ವಿಧಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅಂತೆಯೇ ಸಾರ್ವಜನಿಕವಾಗಿ ಮುತ್ತು ನೀಡುವುದನ್ನೂ ಕೂಡ ನಿಷೇಧಿಸಲಾಗಿದ್ದು, ಮುತ್ತುಕೊಟ್ಟರೂ ದಂಡ ವಿಧಿಸಲು ನಿರ್ಧರಿಸಲಾಗಿದೆ.
ನಿನ್ನೆಯಷ್ಟೇ ಸೌದಿ ಅರೇಬಿಯಾ ಸರ್ಕಾರ ಪ್ರವಾಸಿಗರ ವೀಸಾಗೆ ಅನುಮತಿ ನೀಡಿತ್ತು. ಇದೀಗ ಇದರ ಮುಂದುವರಿದ ಭಾಗವಾಗಿ ಸೌದಿ ಸರ್ಕಾರ ಪ್ರವಾಸಿಗರಿಗೆ ಸಾರ್ವಜನಿಕ ಸಭ್ಯತಾ ನಿಯಮ ಜಾರಿ ಮಾಡಿದೆ. ಅದರಡಿಯಲ್ಲಿ ಸೌದಿಯಲ್ಲಿನ ಮಹಿಳೆಯರು, ಪ್ರವಾಸಿಗರು ಬಿಗಿಯಾದ ಉಡುಪು ಧರಿಸಿದರೆ ಮತ್ತು ಸಾರ್ವಜನಿಕವಾಗಿ ಮುತ್ತುಕೊಟ್ಟರೆ ದುಬಾರಿ ದಂಡ ವಿಧಿಸಲಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಸೌದಿ ಅಧಿಕಾರಿಗಳು ಪ್ರವಾಸಿಗರಿಗೆ ನಮ್ಮ ದೇಶದ ಕಾನೂನಿನ ಕುರಿತು ಅರಿವಿರಬೇಕು ಎಂಬ ಕಾರಣಕ್ಕೇ ಈ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ