ಲಂಕೆಯಲ್ಲಿ ಸರಣಿ ಸ್ಪೋಟ: ಬಾಂಬರ್ ಪೈಕಿ ಓರ್ವ ಮಹಿಳೆ, ಇನ್ನೋರ್ವ ಯುಕೆ ನಲ್ಲಿ ವ್ಯಾಸಂಗ ಮಾಡಿದ್ದ!

ಈಸ್ಟರ್ ಹಬ್ಬದಂದು ದೇಶಾದ್ಯಂತ ನಡೆಸಲಾದ ಭೀಕರ ಸ್ಪೋಟಗಳನ್ನು ನಡೆಸಿದ್ದ ಒಂಬತ್ತು ಅತ್ಮಾಹುತಿ ಬಾಂಬರ್ ಗಳ ಪೈಕಿ ಒಬ್ಬ ಮಹಿಳೆಯೂ ಸೇರಿದ್ದಾಳೆ ಎಂದು ಶ್ರೀಲಂಕಾ ಉಪ ರಕ್ಷಣಾ ಸಚಿವರು ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶ್ರೀಲಂಕಾ ಬಾಂಬ್ ದಾಳಿಯಲ್ಲಿ ಮಡಿದವರಿಗೆ ಮೇಣದ ಬತ್ತಿ ಹಿಡಿದು ಶ್ರದ್ದಾಂಜಲಿ ಸಲ್ಲಿಸುತ್ತಿರುವುದು
ಶ್ರೀಲಂಕಾ ಬಾಂಬ್ ದಾಳಿಯಲ್ಲಿ ಮಡಿದವರಿಗೆ ಮೇಣದ ಬತ್ತಿ ಹಿಡಿದು ಶ್ರದ್ದಾಂಜಲಿ ಸಲ್ಲಿಸುತ್ತಿರುವುದು
ಕೊಲಂಬೋ: ಈಸ್ಟರ್ ಹಬ್ಬದಂದು ದೇಶಾದ್ಯಂತ ನಡೆಸಲಾದ  ಭೀಕರ ಸ್ಪೋಟಗಳನ್ನು  ನಡೆಸಿದ್ದ  ಒಂಬತ್ತು ಅತ್ಮಾಹುತಿ ಬಾಂಬರ್ ಗಳ ಪೈಕಿ  ಒಬ್ಬ ಮಹಿಳೆಯೂ ಸೇರಿದ್ದಾಳೆ ಎಂದು ಶ್ರೀಲಂಕಾ ಉಪ ರಕ್ಷಣಾ ಸಚಿವರು ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಪೋಟಗಳನ್ನು ಒಂಬತ್ತು ಅತ್ಮಾಹುತಿ ಬಾಂಬರ್ ನಡೆಸಿದ್ದರು ಎಂದು  ಖಚಿತಪಡಿಸಿ, 8 ಮಂದಿಯನ್ನು ಪೊಲೀಸರು ಗುರುತಿಸಿದ ನಂತರ  ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಈ ವಿಷಯ ತಿಳಿಸಿದ್ದಾರೆ.
ಈ ಪೈಕಿ ಒಬ್ಬ ವ್ಯಕ್ತಿ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ  ವ್ಯಾಸಂಗ ನಡೆಸಿದ್ದ, ದ ಸ್ಟ್ರೈಟ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ದಕ್ಷಿಣ ಏಷ್ಯಾದ  ಇತಿಹಾಸದಲ್ಲೇ  ಅತ್ಯಂತ  ಭಯಾನಕ ಎಂದೇ ಪರಿಗಣಿಸಲಾಗಿರುವ ಈ ಸ್ಪೋಟಗಳಲ್ಲಿ ಈ ವರೆಗೆ ಕನಿಷ್ಟ 359 ಮಂದಿ ಮೃತಪಟ್ಟಿದ್ದು, ಈ ಪೈಕಿ 39 ವಿದೇಶಿಯರು ಸೇರಿದ್ದಾರೆ.
ಕೃತ್ಯಗಳಿಗೆ ಸಂಬಂಧಿಸಿದಂತೆ, ಪೊಲೀಸರು ದ್ವೀಪ ರಾಷ್ಟ್ರದೆಲ್ಲೆಡೆ, ಹಗಲು ರಾತ್ರಿ ಎನ್ನದೆ ಶೋಧನೆ ನಡೆಸುತ್ತಿದ್ದು, ಈ ವರೆಗೆ 18ಕ್ಕೂ ಹೆಚ್ಚುಮಂದಿಯನ್ನು ಬಂಧಿಸಿದ್ದಾರೆ.
ಓರ್ವ ಸಿರಿಯಾ ನಾಗರೀಕ ಸೇರಿದಂತೆ, 60ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಪೊಲೀಸರು  ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 
ನೂರಾರು ಮಂದಿ ಸಾವನ್ನಪ್ಪಿದ ಗೋಥೆಕ್  ಶೈಲಿಯ ಸೇಂಟ್ ಸೆಬಾಸ್ಟಿಯನ್ ಚರ್ಚ್ ಪ್ರದೇಶದ ಸುತ್ತಮುತ್ತ  ಪೊಲೀಸರು ಹಗಲು, ರಾತ್ರಿ  ಎನ್ನದೆ ದಾಳಿ ನಡೆಸಿದ್ದಾರೆ.
 2014ರಲ್ಲಿ  ವ್ಯಾಪಕ ಮುಸ್ಲಿಮ್ ಗಲಭೆಗಳು  ನಡೆದಿದ್ದ  ಪಶ್ಚಿಮ ಶ್ರೀಲಂಕಾದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇಂತಹ ಕಾರ್ಯಾಚರಣೆಗಳು ದೇಶದೆಲ್ಲೆಡೆ  ನಡೆಯುತ್ತಿವೆ,  ಮುಸ್ಲಿಂ ಪ್ರದೇಶಗಳಲ್ಲಿ  ಕಟ್ಟುನಿಟ್ಟಿನ  ತಪಾಸಣೆಗಳು ನಡೆಯುತ್ತಿವೆ ಎಂದು ಭದ್ರತಾ ಮೂಲಗಳು ಹೇಳಿವೆ
ಈ ನಡುವೆ, ರಾಜಧಾನಿ ಕೊಲಂಬೊ್  ಜನಪ್ರಿಯ ಸವೊಯ್ ಸಿನಿಮಾ ಮಂದಿರದ ಬಳಿ ಸಂಶಯಾಸ್ಪದವಾಗಿ ಪಾರ್ಕಿಂಗ್ ಮಾಡಲಾಗಿದ್ದ ಮೋಟಾರ್ ಸ್ಕೂಟರ್  ಅನ್ನು ಪೊಲೀಸರು ಸ್ಪೋಟಿಸಿದ್ದಾರೆ. ಆದರೆ, ವಾಹನದಲ್ಲಿ ಯಾವುದೇ ಸ್ಪೋಟಕಗಳಿರಲಿಲ್ಲ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com