ಅಸ್ಥಿರ ಜಗತ್ತಿನಲ್ಲಿ ಭಾರತ- ಚೀನಾ ಸಂಬಂಧ ಸ್ಥಿರತೆಯ ಅಂಶವಾಗಬೇಕು: ವಿದೇಶಾಂಗ ಸಚಿವ ಜೈ ಶಂಕರ್

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸೋಮವಾರ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 
ಅಸ್ಥಿರ ಜಗತ್ತಿನಲ್ಲಿ ಭಾರತ- ಚೀನಾ ಸಂಬಂಧ ಸ್ಥಿರತೆಯ ಅಂಶವಾಗಬೇಕು: ವಿದೇಶಾಂಗ ಸಚಿವ ಜೈ ಶಂಕರ್

ಬೀಜಿಂಗ್: ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸೋಮವಾರ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

ಅವರು ಚೀನಾ ಉಪಾಧ್ಯಕ್ಷ ವಾಂಗ್ ಕಿಶನ್ ಅವರನ್ನು ಭೇಟಿಯಾಗಿದ್ದರು. ಭಾರತ - ಚೀನಾ ಸಾಂಸ್ಕೃತಿಕ ವಿನಿಮಯ ಕುರಿತು ಎರಡನೇ ಸಭೆಯಲ್ಲಿ ಭಾಗಿಯಾಗಲು ಜೈಶಂಕರ್ ಮೂರು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಅಸ್ಥಿರ ಜಗತ್ತಿನಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ಸ್ಥಿರತೆಯ ಅಂಶವಾಗಿರಬೇಕು ಎಂದು ಹೇಳಿದ್ದಾರೆ. 

ಭಾರತ - ಚೀನಾ ಸಾಂಸ್ಕೃತಿಕ ವಿನಿಮಯ ಕುರಿತ ಸಭೆಯ ಅಧ್ಯಕ್ಷತೆಯನ್ನು  ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com