ಭೂತಾನ್ ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯವಿದೆ: ಪ್ರಧಾನಿ ನರೇಂದ್ರ ಮೋದಿ

ಭೂತಾನ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನ್ ನ ಭವಿಷ್ಯದ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯಗಳಿವೆ ಎಂದಿದ್ದಾರೆ. 
ಭೂತಾನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ಭೂತಾನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ಥಿಂಫು(ಭೂತಾನ್): ಭೂತಾನ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನ್ ನ ಭವಿಷ್ಯದ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯಗಳಿವೆ ಎಂದಿದ್ದಾರೆ. ಅಂತರಿಕ್ಷ ಮತ್ತು ಡಿಜಿಟಲ್ ಪೇಮೆಂಟ್ ನಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಸಾಕಷ್ಟು ಸಹಕಾರಕ್ಕೆ ಇದೇ ಸಂದರ್ಭದಲ್ಲಿ ಅವರು ಪ್ರಸ್ತಾವನೆ ಮುಂದಿಟ್ಟರು.


ಭೂತಾನ್ ನ ರಾಯಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಕಷ್ಟು ಶ್ರಮ ಹಾಕಿ ಶ್ರದ್ಧೆಯಿಂದ ಕೆಲಸ ಮಾಡಿ ಹಿಮಾಲಯ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಒಯ್ಯುವಂತೆ ಕರೆ ನೀಡಿದರು.


ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳು ಇಂದು ವಿಶ್ವದಲ್ಲಿ ತೆರೆದುಕೊಂಡಿದೆ. ನಿಮ್ಮಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಸಾಕಷ್ಟಿದೆ. ಅದು ಭವಿಷ್ಯದ ತಲೆಮಾರಿನ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಮನಸ್ಸಿಗೆ ಹತ್ತಿರವಾದುದನ್ನು ಪೂರ್ಣ ಆಸಕ್ತಿಯಿಂದ, ಇಚ್ಛೆಯಿಂದ ಮಾಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು. 


ಮುಂದೆ ನಿಮಗೆ ಸಾಕಷ್ಟು ಸವಾಲುಗಳು ಬರುತ್ತವೆ, ಪ್ರತಿ ಸವಾಲುಗಳಿಂದ ಹೊರಬರಲು ನಮ್ಮಲ್ಲಿ ಕ್ರಿಯಾಶೀಲ ಪರಿಹಾರಗಳನ್ನು ಕಂಡುಕೊಳ್ಳಲು ಯುವ ಸಮುದಾಯಗಳಿವೆ. ಯಾವುದೇ ಇತಿಮಿತಿಗಳು ನಿಮ್ಮನ್ನು ತಡೆಯದಿರಲಿ, ಈಗಿರುವ ಸಮಯಕ್ಕಿಂತ ಉತ್ತಮ ಸಮಯ ಮತ್ತು ಅವಕಾಶ ಯುವ ಸಮುದಾಯಕ್ಕೆ ಬೇರೆ ಇಲ್ಲ ಎಂದು ನಾನು ಹೇಳಲು ಬಯಸುತ್ತೇನೆ ಎಂದರು.


ಎರಡನೇ ಬಾರಿಗೆ ಪ್ರಧಾನಿಯಾದ ನಂತರ ಭೂತಾನ್ ಗೆ ಮೋದಿಯವರು ಭೇಟಿ ಕೊಡುತ್ತಿರುವುದು ಇದು ಎರಡನೇ ಬಾರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com