ಸುಡಾನ್: ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಪಿಜಿ ಟ್ಯಾಂಕರ್ ಸ್ಫೋಟ, 18 ಭಾರತೀಯರು ಸೇರಿ 23 ಸಾವು

ಸುಡಾನ್ ರಾಜಧಾನಿ ಖರ್ಟೋಮ್ ನಲ್ಲಿನ ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಜಿಪಿ ಟ್ಯಾಂಕರ್ ಸ್ಫೋಟಗೊಂಡಿದ್ದು, ಭೀಕರ ದುರಂತದಲ್ಲಿ 18 ಭಾರತೀಯರು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ ಎಂದು ಬುಧವಾರ ಭಾರತೀಯ...
ಕಾರ್ಖಾನೆಯಲ್ಲಿ ಸ್ಫೋಟ
ಕಾರ್ಖಾನೆಯಲ್ಲಿ ಸ್ಫೋಟ

ಖರ್ಟೋಮ್: ಸುಡಾನ್ ರಾಜಧಾನಿ ಖರ್ಟೋಮ್ ನಲ್ಲಿನ ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಜಿಪಿ ಟ್ಯಾಂಕರ್ ಸ್ಫೋಟಗೊಂಡಿದ್ದು, ಭೀಕರ ದುರಂತದಲ್ಲಿ 18 ಭಾರತೀಯರು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ ಎಂದು ಬುಧವಾರ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಖರ್ಟೋಮ್ ನ ಬಹ್ರಿ ಪ್ರದೇಶದಲ್ಲಿರುವ ಸೀಲ ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ 18 ಭಾರತೀಯರು ಮೃತಪಟ್ಟಿರುವುದಾಗಿ ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಚಿತಪಡಿಸಿದೆ.

ಈ ಕಾರ್ಖಾನೆಯಲ್ಲಿ 50ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯ ನಂತರ ಇನ್ನು 16 ಭಾರತೀಯ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಹೀಗಾಗಿ ಭಾರತೀಯ ಕಾರ್ಮಿಕರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ. 

ಸ್ಪೋಟದಿಂದ ದೇಹಗಳು ಸಂಪೂರ್ಣ ಸುಟ್ಟುಹೋಗಿರುವುದರಿಂದ ಪತ್ತೆಹಚ್ಚಲು ಕಷ್ಟಕರವಾಗಿದೆ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಭಾರತೀಯರ ಪಟ್ಟಿಯನ್ನು ರಾಯಭಾರಿ ಬಹಿರಂಗಪಡಿಸಿದ್ದು, 7 ಭಾರತೀಯರು ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಪವಾಡ ರೀತಿಯಲ್ಲಿ ಬದುಕುಳಿದಿರುವ 34 ಭಾರತೀಯರಿಗೆ ಸಲೂಮಿ ಸೆರಾಮಿಕ್ಸ್​ ಕಾರ್ಖಾನೆಯ ನಿವಾಸಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ದುರಂತ ನಡೆದ ಸ್ಥಳದಲ್ಲಿ ಅಗ್ನಿ ಸುರಕ್ಷತಾ ಕ್ರಮ ಇರದಿದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಯಾವುದೇ ಸುರಕ್ಷತೆಯಿಲ್ಲದೆ ಸಂಗ್ರಹಿಸಿಟ್ಟಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com